ಪ್ರಮುಖ ಮುಖ್ಯಾಂಶಗಳು
ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ನೀಡಿರುವ ಮೂಡುಬಿದಿರೆಯಲ್ಲಿ ಸ್ಕೇಟಿಂಗ್ ಟ್ರ್ಯಾಕ್ ಅವಶ್ಯಕತೆ ಮನಗಂಡು ಅಂದಿನ ಶಾಸಕರಾಗಿದ್ದ ಕೆ.ಅಭಯಚಂದ್ರ ಜೈನ್ ವಿಶೇಷ ಆಸಕ್ತಿ ವಹಿಸಿ ಈ ಯೋಜನೆ ತರಿಸಿದ್ದರು. ಮೊದಲು ಜನರು ಆಕರ್ಷಿಸಿದ ಯೋಜನೆ ಕೆಲವು ವರ್ಷಗಳಿಂದ ನಿರುಪಯುಕ್ತ ಸ್ಥಿತಿಯಲ್ಲಿದೆ. ಟ್ರ್ಯಾಕ್‌ನ ನಿರ್ವಹಣೆಯನ್ನು ಗಾಂಧಿಪಾರ್ಕ್ ನಿರ್ವಹಣೆ ಮಾಡುವ ಅಮೃತ್ ಮಿತ್ರ ಸ್ವಸಹಾಯ ಸಂಘದವರು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಇದನ್ನು ಸದ್ಬಳಕೆ ಮಾಡುವಂತೆ ಕ್ರೀಡಾ ಇಲಾಖೆಯನ್ನು ಹಲವಾರು ಬಾರಿ ಸಂಪರ್ಕಿಸಿದ್ದೇವೆ.