ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆಯ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆ ಕಾಸರಗೋಡು ಜಿಲ್ಲಾಧಿಕಾರಿ ಚೇಂಬರ್‌ನಲ್ಲಿ ಜರುಗಿತು. ಕೆ.ಇನ್ಬಾಶೇಖರ್, ಟಿ.ರಾಜೇಶ್, ರಾಘವೇಂದ್ರ, ಎನ್.ಕೆ.ಸಂತೋಷ್ ಮತ್ತಿತರರಿರು.  
ದಕ್ಷಿಣ ಕನ್ನಡ

ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆ

ಸೌಮ್ಯ ಆರ್
ಕಾಸರಗೋಡು: ‘ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ’ಯ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆ ಕಾಸರಗೋಡು ಜಿಲ್ಲಾಧಿಕಾರಿ ಚೇಂಬರ್‌ನಲ್ಲಿ ನಡೆಯಿತು.
ಪಿಎಂ ಧನ್-ಧಾನ್ಯ ಕೃಷಿಯೋಜನೆಯನ್ವಯ ಅಭಿವೃದ್ಧಿಶೀಲ ಕೃಷಿ ಜಿಲ್ಲೆಗಳ ಅಭಿವೃದ್ಧಿ ದೀರ್ಘಾವಧಿ ಯೋಜನೆಯಾಗಿದ್ದು, ಹಿಂದುಳಿದ ಪ್ರದೇಶಗಳ ಕೃಷಿ ವಲಯ ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. 100 ಜಿಲ್ಲೆಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಕಾಸರಗೋಡು, ಕಣ್ಣೂರು ಮತ್ತು ಕೋಯಿಕ್ಕೋಡ್ ಜಿಲ್ಲೆ ಆಯ್ಕೆ ಮಾಡಲಾಗಿದೆ ಎಂದು ಡಾ.ಫೆಮಿನಾ ವಿವರಿಸಿದರು.