ಉಜಿರೆ ಶ್ರೀ ರಾಮಕೃಷ್ಣ ಸಭಾಭವನದಲ್ಲಿ ಮಂಗಳವಾರ ಸಮಾಲೋಚನಾ ಸಭೆಯಲ್ಲಿ ಪಾದಯಾತ್ರೆ ಕರಪತ್ರ ಬಿಡುಗಡೆಗೊಳಿಸಲಾಯಿತು. 
ದಕ್ಷಿಣ ಕನ್ನಡ

ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ತರಲು ಅಸಾಧ್ಯ : ಹರೀಶ್ ಕುಮಾರ್ ವಿಶ್ವಾಸ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ವಾಸದಲ್ಲಿ ನಡೆಯುವ ಲಕ್ಷ ದೀಪೋತ್ಸವ ಮಹೋತ್ಸವ ಪ್ರಯುಕ್ತ ನ.15ರಂದು ನಡೆಯುವ 13ನೇ ವರ್ಷದ ಪಾದಯಾತ್ರೆ ಕುರಿತು ಉಜಿರೆಯಲ್ಲಿ ಮಂಗಳವಾರ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಕ್ಷೇತ್ರದ ಭಕ್ತರಾಗಿ ನಾವೆಲ್ಲರೂ ಆರಂಭಿಸಿದ ಈ ಪಾದಯಾತ್ರೆ ಇಂದು ಒಂದು ಪರಂಪರೆಯಾಗಿ ಪರಿವರ್ತನೆಯಾಗಿದೆ. ಶ್ರೀ ಕ್ಷೇತ್ರ ಶಿಸ್ತಿನ ಪ್ರತೀಕವೂ ಆಗಿದೆ. ಐನೂರು ಜನರಿಂದ ಆರಂಭವಾದ ಪಾದಯಾತ್ರೆ ಇಂದು ಜನಸಮೂಹದ ಒಗ್ಗೂಡುವಿಕೆಯ ಮಹಾಶಕ್ತಿಯಾಗಿ ಪರಿವರ್ತನೆಯಾಗಿದೆ. ಕೀರ್ತಿಶೇಷರಾದ ವಿಜಯರಾಘವ ಪಡುವೆಟ್ನಾಯ ಮತ್ತು ಡಾ.ಯಶೋವರ್ಮರು ಹಿಂದೆ ಮಾರ್ಗದರ್ಶನ ನೀಡಿದ್ದರು. ಈ ಪಾದಯಾತ್ರೆ ಧರ್ಮಸ್ಥಳ ಕ್ಷೇತ್ರದ ಮಾತ್ರ ಕಾರ್ಯಕ್ರಮ ಅಲ್ಲ. ಇದು ನಮ್ಮೆಲ್ಲರ ಕಾರ್ಯಕ್ರಮ ಎಂದಾಗಬೇಕು.