ಧರಿತ್ರಿ ಭಿಡೆ ಹಾಗೂ ಹಂಸಿನಿ ಭಿಡೆ 
ದಕ್ಷಿಣ ಕನ್ನಡ

ಫೆ.21ರಂದು ಧರಿತ್ರಿ ಭಿಡೆ ಹಾಗೂ ಹಂಸಿನಿ ಭಿಡೆ ಭರತನಾಟ್ಯ ರಂಗಪ್ರವೇಶ

ಮಂಗಳೂರು: ಉರ್ವ ಮಾರ್ಕೆಟ್ ನ ನಾಟ್ಯಾರಾಧನಾ ಕಲಾ ಕೇಂದ್ರದ ನಿರ್ದೇಶಕಿ ಗುರು ವಿದುಷಿ ಸುಮಂಗಲಾ ರತ್ನಾಕರ್ ರಾವ್ ಅವರ ವಿದ್ಯಾರ್ಥಿಗಳಾದ ಧರಿತ್ರಿ ಭಿಡೆ ಹಾಗೂ ಹಂಸಿನಿ ಭಿಡೆ ಇವರ ಭರತನಾಟ್ಯ ರಂಗಪ್ರವೇಶವು ಫೆ.21ರಂದು ಉಜಿರೆಯ ಎಸ್.ಡಿ.ಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಸಂಜೆ 4.30ಕ್ಕೆ ನಡೆಯಲಿದೆ.
ಬೆಂಗಳೂರಿನ ಅಭಿನವ ಡಾನ್ಸ್ ಕಂಪೆನಿಯ ಕಲಾತ್ಮಕ ನಿರ್ದೇಶಕರಾದ ನಿರುಪಮಾ ಮತ್ತು ರಾಜೇಂದ್ರ ಟಿ.ಡಿ, ನಾಟ್ಯಾಂಜಲಿ ಕಲಾ ಅಕಾಡಮಿ ಸುರತ್ಕಲ್ ನ ಗುರು ವಿದ್ವಾನ್ ಚಂದ್ರಶೇಖರ ನಾವಡ , ಎಸ್.ಡಿ.ಎಂ.ಸೊಸೈಟಿಯ ಕಾರ್ಯದರ್ಶಿ ಸತೀಶ್ಚಂದ್ರ , ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಮ್ಯಾನೇಜಿಂಗ್ ಟ್ರಷ್ಟಿ ಶರತ್ಕೃಷ್ಣ ಪೆಡ್ವಟ್ನಾಯರು ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.
ಬೆಳ್ತಂಗಡಿಯ ಕಲ್ಮಂಜದ ನಿವಾಸಿ, ಉಜಿರೆಯ ಪತ್ರಿಕಾ ವಿತಕ ಧನಂಜಯ ಭಿಡೆ ಹಾಗೂ ಚಿತ್ರಾ ಭಿಡೆ ದಂಪತಿಯ ಮಕ್ಕಳಾದ ಧರಿತ್ರಿ ಭಿಡೆ, ಎಸ್.ಡಿ.ಎಂ.ಡಿಗ್ರಿ ಕಾಲೇಜಿನ ತೃತೀಯ ಬಿಕಾಂ ವಿದ್ಯಾರ್ಥಿನಿಯಾಗಿದ್ದು, ಭರತನಾಟ್ಯ ವಿದ್ವತ್ಪೂರ್ವ ಹಂತದ ಪರೀಕ್ಷೆಯನ್ನು ( ಭರತನಾಟ್ಯ ಪ್ರೌಢ) ಬೆಂಗಳೂರಿನ ಎಸ್- ವ್ಯಾಸ ವಿಶ್ವವಿದ್ಯಾಲಯದ ಎಸ್- ಸೊಸೈಟಿಯ ಸ್ಪೆಕ್ ಪರೀಕ್ಷೆಯ ಮೂಲಕ ಪ್ರಥಮ ರ‌್ಯಾಂಕ್‌ನೊಂದಿಗೆ ತೇರ್ಗಡೆ ಹೊಂದಿದ್ದಾರೆ. ಹಂಸಿನಿ ಭಿಡೆ, ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯ ಕಾಮರ್ಸ್ ವಿಭಾಗ ವಿದ್ಯಾರ್ಥಿನಿಯಾಗಿದ್ದು ಕೆ.ಎಸ್.ಇ.ಬಿ ನಡೆಸಿದ್ದ ಭರತನಾಟ್ಯ ಸೀನಿಯರ್ ಪರೀಕ್ಷೆಯನ್ನು ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಗುರು ಸುಮಂಗಲಾ ರತ್ನಾಕರ್ ರಾವ್ ಅವರ ನಟುವಾಂಗಂ ಮತ್ತು ನೃತ್ಯ ನಿರ್ದೇಶನದಲ್ಲಿ, ಅವರು ರಚಿಸಿರು ಭರತನಾಟ್ಯ ಕನ್ನಡ ಮಾಗರ್ಂನ ನೃತ್ಯಬಂಧಗಳಿಗೆ ಭಿಡೆ ಸಹೋದರಿಯರು ನೃತ್ಯ ಪ್ರಸ್ತುತಿ ನೀಡಲಿದ್ದು , ಹಿಮ್ಮೇಳದಲ್ಲಿ ಬೆಂಗಳೂರಿನ ವಿ. ರೋಹಿತ್ ಭಟ್ ಉಪ್ಪೂರು( ಗಾಯನ) , ವಿನಯ್ ನಾಗರಾಜ್ ( ಮೃದಂಗ), ನಿತೀಶ್ ಅಮ್ಮಣ್ಣಾಯ( ಕೊಳಲು) ಹಾಗೂ ವಿ.ವೈ.ಜಿ. ಶ್ರೀಲತಾ ನಿಕ್ಷಿತ್ (ವೀಣೆ) ಭಾಗವಹಿಸಲಿದ್ದಾರೆ. ಉಚಿತ ಪ್ರವೇಶಾವಕಾಶವನ್ನು ಕಲ್ಪಿಸಿರುವ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ನಾಟ್ಯಾರಾಧನಾ ಕಲಾ ಕೇಂದ್ರದ ಟ್ರಷ್ಠಿ ಬಿ ರತ್ನಾಕರ ರಾವ್ ಹಾಗೂ ಧನಂಜಯ ಭಿಡೆ ತಿಳಿಸಿದ್ದಾರೆ.