ಡಾ.ಎನ್.ಶೀತಲ್ ಕುಮಾರ್, ಡಾ.ಜಗದೀಶ್ ಕೋನರೆಡ್ಡಿ ಅವರಿಗೆ ಆಳ್ವಾಸ್ ಧನ್ವಂತರಿ ಪ್ರಶಸ್ತಿ, ಡಾ.ಜಿತೇಶ್ ಎಂ.ಕೆ. ಅವರಿಗೆ ಧನ್ವಂತರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ಎಂ.ಮೋಹನ ಆಳ್ವ ಮತ್ತಿತರರು ಉಪಸ್ಥಿತರಿದ್ದರು. 
ದಕ್ಷಿಣ ಕನ್ನಡ

ಆಳ್ವಾಸ್ ಮಹಾವಿದ್ಯಾಲಯ ದೇಶಕ್ಕೆ ಮಾದರಿ : ಡಾ.ಎನ್.ಶೀತಲ್‌ ಕುಮಾರ್

ಜೀವಕಾ, ಆಯುರ್‌ವಿಶಾರದ ಪುರಸ್ಕಾರ

ಆಯುರ್ವೇದ ವಿದ್ಯಾಭ್ಯಾಸವು ಕೇವಲ ಪದವಿ ಪ್ರಾಪ್ತಿಯ ಮಾರ್ಗವಲ್ಲ. ಮೌಲ್ಯ, ಶಿಸ್ತು, ಸೇವೆಗಳನ್ನು ಅಳವಡಿಸಿಕೊಳ್ಳುವ ಜೀವನಪಥವಾಗಿದೆ. ಇಂದಿನ ಯುಗದಲ್ಲಿ ಹೊಸ ರೋಗಗಳು, ಜೀವನಶೈಲಿ ಬದಲಾವಣೆಗಳು, ತಂತ್ರಜ್ಞಾನಾಭಿವೃದ್ಧಿ ಹಾಗೂ ವಿಜ್ಞಾನಾಧಾರಿತ ಸಂಶೋಧನೆಗಳು ನಿರಂತರ ನಡೆಯುತ್ತಿವೆ. ಆಯುರ್ವೇದ ವೈದ್ಯರು ಮತ್ತು ವಿದ್ಯಾರ್ಥಿಗಳು ಕೇವಲ ಸಾಂಪ್ರದಾಯಿಕ ಜ್ಞಾನಕ್ಕೆ ಸೀಮಿತರಾಗದೆ, ಅದರ ವೈಜ್ಞಾನಿಕ ದೃಢೀಕರಣ, ಆಧುನಿಕ ದೃಷ್ಟಿಕೋನ ಮತ್ತು ಸಂಶೋಧನಾ ಫಲಿತಾಂಶಗಳೊಂದಿಗೆ ಜ್ಞಾನ ನವೀಕರಿಸಿಕೊಳ್ಳಬೇಕು.