ಕಾಪಿನಬಾಗಿಲು ನಿವಾಸಿ ರಾಧಾಮ್ಮ ಹಾಗೂ ಮುತ್ತು ಸ್ವಾಮಿ ದಂಪತಿ ನ್ಯಾಯಕ್ಕಾಗಿ ನಡೆಸಿದ ಆಹೋರಾತ್ರಿ ಧರಣಿ ೮ನೇ ದಿನ ಶಾಸಕ ಅಶೋಕ್ ಕುಮಾರ್ ರೈ ಮಧ್ಯಸ್ಥಿಕೆಯಲ್ಲಿ ಅಂತ್ಯಗೊಂಡಿದ್ದು, ಧರಣಿ ನಿರತರಿಗೆ ಪಾನೀಯ ವಿತರಿಸಿದರು. 
ದಕ್ಷಿಣ ಕನ್ನಡ

ಅಡಿಸ್ಥಳ ಮಂಜೂರು, ಸರ್ಕಾರದಿಂದ ಮನೆ Puttur Protest

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ಅಶೋಕ್ ಕುಮಾರ್ ರೈ ಮಾತುಕತೆ
  • ೮ನೇ ದಿನಕ್ಕೆ ಆಹೋರಾತ್ರಿ ಧರಣಿ ಅಂತ್ಯ
ಪುತ್ತೂರು: ಮನೆ ಕಳೆದುಕೊಂಡ ಕೌಕ್ರಾಡಿ ಕಾಪಿನಬಾಗಿಲು ನಿವಾಸಿ ರಾಧಾಮ್ಮ ಹಾಗೂ ಮುತ್ತು ಸ್ವಾಮಿ ದಂಪತಿ ನ್ಯಾಯಕ್ಕಾಗಿ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ನಡೆಸುತ್ತಿರುವ ಆಹೋರಾತ್ರಿ ಧರಣಿ ೮ನೇ ದಿನ ಶಾಸಕ ಅಶೋಕ್‌ಕುಮಾರ್‌ರೈ ಮಧ್ಯಸ್ಥಿಕೆಯಲ್ಲಿ ಅಂತ್ಯಗೊಂಡಿದೆ.
ಸತ್ಯಸಾಯಿ ಮಂದಿರದ ಲಕ್ಷ್ಮೀನಾರಾಯಣ, ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಭೇಟಿ ನೀಡಿ ಬೆಂಬಲ ಸೂಚಿಸಿದರು. ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ, ಕಂದಾಯ ನಿರೀಕ್ಷಕ ಪ್ರಥ್ವಿರಾಜ್, ಕೌಕ್ರಾಡಿ ಗ್ರಾಮಕರಣಿಕ ಸಂತೋಷ್ ಅವರನ್ನು ಪುತ್ತೂರಿಗೆ ಕರೆಸಿ ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಸಮ್ಮುಖದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಮಾತುಕತೆ ನಡೆಸಿದರು.
ಅಡಿಸ್ಥಳದ ದಾಖಲೆ ಸರಿಯಾದ ತಕ್ಷಣ ಸಂಬಂಧಪಟ್ಟ ಸಚಿವರಲ್ಲಿ ಮಾತುಕತೆ ನಡೆಸಿ ವಿಶೇಷ ಪ್ರಕರಣವಾಗಿ ರಾಜೀವ ಗಾಂಧಿ ನಿಗಮದಿಂದ ಮನೆ ಕಟ್ಟಲು ಅನುದಾನ ಕೊಡಿಸಲಾಗುವುದು. ಇದಕ್ಕೆ ಒಪ್ಪಿ ಪ್ರತಿಭಟನೆ ಹಿಂಪಡೆದುಕೊಳ್ಳಬೇಕೆಂದು ಶಾಸಕರು ಮನವಿ ಮಾಡಿದರು. ನಿಯಮ ಪ್ರಕಾರ ಅಗತ್ಯ ಕಾರ್ಯಗಳನ್ನು ಇಲಾಖೆಯಿಂದ ಮಾಡಲಾಗುವುದು ಎಂದು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ತಿಳಿಸಿದರು. ಜೂಸ್ ನೀಡುವ ಮೂಲಕ ಧರಣಿಯನ್ನು ಅಂತ್ಯಗೊಳಿಸಲಾಯಿತು.
ನೀತಿ ತಂಡದ ಜಯಂತ್ ಟಿ., ಪುತ್ರ ಸುಬ್ರಹ್ಮಣ್ಯ, ಪುತ್ರಿ ರೇಣುಕಾ ಉಪಸ್ಥಿತರಿದ್ದರು.

೯೪ಸಿ ಅರ್ಜಿ ಮರು ಪರಿಶೀಲನೆ

ವಾರದಿಂದ ವೃದ್ಧ ದಂಪತಿ ನಡೆಸುತ್ತಿರುವ ಧರಣಿ ಮಾನವಹಕ್ಕು, ಮಹಿಳಾ ಆಯೋಗ ಸೇರಿ ವಿವಿಧ ಕಡೆಗೆ ದೂರುಗಳು ಹೋಗಿತ್ತು. ಇದೆಲ್ಲವನ್ನೂ ಗಮನಿಸಿ ರಾಧಮ್ಮ ಅವರ ತಿರಸ್ಕೃತ ೯೪ ಸಿ ಅರ್ಜಿಯನ್ನು ಮರು ಪರಿಶೀಲನೆ ಮಾಡುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಧರಣಿ ನಿರತರು ಮತ್ತೆ ಅರ್ಜಿ ನೀಡಿದರು.
"

ಮುಂದಿನ ೧೦ ದಿನದಲ್ಲಿ ವಾಸವಿದ್ದ ಜಾಗವನ್ನು ಅವರ ಹೆಸರಿಗೆ ೯೪ ಸಿ ಮೂಲಕ ಮಾಡಲಾಗುವುದು. ಮನೆ ನಿರ್ಮಾಣಕ್ಕೆ ರಾಜೀವ ಗಾಂಧಿ ನಿಗಮದಿಂದ ೨ ಲಕ್ಷ ರೂ. ಅನುದಾನ ನೀಡುವ ಮೂಲಕ ಸಮಸ್ಯೆಗೆ ಪರಿಹಾರ ನೀಡುವ ಕಾರ್ಯವಾಗಿದೆ.

"

ತನಿಕೆಯ ವರದಿ ತಹಸೀಲ್ದಾರ್ ಕಡೆಯಿಂದ ಇನ್ನೂ ಬಂದಿಲ್ಲ. ಇದರಲ್ಲಿ ಏನಾದರೂ ತಪ್ಪು ಆಗಿದ್ದಲ್ಲಿ ಅಗತ್ಯ ಕ್ರಮಕ್ಕೆ ಸಬಂಧಪಟ್ಟವರಿಗೆ ಬರೆಯಲಾಗುವುದು. ೯೪ ಸಿ ತಿರಸ್ಕಾರಗೊಂಡರೂ, ಮೇಲ್ಮನವಿ ಸಲ್ಲಿಸಲು ಅವಕಾಶಗಳಿದ್ದು, ಅವರು ಅದಕ್ಕೆ ಅರ್ಜಿಯನ್ನು ಸಲ್ಲಿಸುತ್ತಾರೆ. ಮರು ತನಿಖೆ ನಡೆಸಲು ತಹಸೀಲ್ದಾರ್‌ಗೆ ಸೂಚನೆ ನೀಡುತ್ತೇವೆ.

"

ಸುಳ್ಯ ಶಾಸಕರು ಸಹಿತ ಜನಪ್ರತಿನಿಽಗಳಿಂದ ಈ ಬಡವರಿಗೆ ನ್ಯಾಯ ಸಿಕ್ಕಿಲ್ಲ. ಅಶೋಕ್ ಕುಮಾರ್ ರೈ ಭರವಸೆಯ ಹಿನ್ನೆಲೆಯಲ್ಲಿ ಹೋರಾಟ ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದೇವೆ.