ಮನೆ ಕಳೆದುಕೊಂಡ ಕೌಕ್ರಾಡಿ ಕಾಪಿನಬಾಗಿಲು ನಿವಾಸಿ ರಾಧಮ್ಮ ಹಾಗೂ ಮುತ್ತು ಸ್ವಾಮಿ ವೃದ್ಧ ದಂಪತಿ ನಡೆಸುತ್ತಿರುವ ಆಹೋರಾತ್ರಿ ಧರಣಿ ಸ್ಥಳಕ್ಕೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿ ಮಾತುಕತೆ ನಡೆಸಿದರು. ನೀತಿ ತಂಡ ಜಯಂತ ಟಿ., ಪುತ್ರ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.
- ಅಶೋಕ್ ಕುಮಾರ್ ರೈ ಭರವಸೆ
- ಧರಣಿ ವಾರ ಪೂರೈಸಿದರೂ ಸಿಗದ ನ್ಯಾಯ
ಪುತ್ತೂರು: ಮನೆ ಕಳೆದುಕೊಂಡ ಕೌಕ್ರಾಡಿ ಕಾಪಿನಬಾಗಿಲು ನಿವಾಸಿ ರಾಧಮ್ಮ ಹಾಗೂ ಮುತ್ತು ಸ್ವಾಮಿ ವೃದ್ಧ ದಂಪತಿ ನ್ಯಾಯಕ್ಕಾಗಿ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ನಡೆಸುತ್ತಿರುವ ಆಹೋರಾತ್ರಿ ಧರಣಿ ವಾರ ಪೂರೈಸಿದ್ದು, ಸ್ಥಳಕ್ಕೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿ ಅಧಿಕಾರಿಗಳನ್ನು ಕರೆಸಿ ಮಾತುಕತೆ ಮಾಡುವ ಭರವಸೆ ನೀಡಿದರು.
ವೃದ್ಧ ದಂಪತಿಗಳ ಪಕ್ಕದಲ್ಲೇ ಕುಳಿತು, ಅವರ ಸಮಸ್ಯೆ ಆಲಿಸಿ, ಕಡಬ, ಸುಳ್ಯ, ಪುತ್ತೂರು ಭಾಗದ ಅಧಿಕಾರಿಗಳಿಗೆ ಕರೆ ಮಾಡಿದ್ದು, ಯಾರೊಬ್ಬರೂ ಕರೆ ಸ್ವೀಕರಿಸಿಲ್ಲ. ಉಪವಾಸ ಸತ್ಯಾಗ್ರಹವನ್ನು ವಾಪಸ್ ಪಡೆದುಕೊಳ್ಳುವಂತೆ ಮನವಿ ಮಾಡಿದ ಶಾಸಕರು ನ್ಯಾಯ ದೊರಕಿಸುವ ಭರವಸೆ ನೀಡಿದರು.
ನೀತಿ ತಂಡ ಜಯಂತ ಟಿ. ಮಾತನಾಡಿ, ವೃದ್ಧ ದಂಪತಿಗಳ ಬಗ್ಗೆ ಸಹಾಯಕ ಆಯುಕ್ತರಿಗೆ ಮಾನವೀಯತೆಯಿಲ್ಲ. ೨೦೧೨ರಿಂದ ಮನೆ ಕೆಡವಿದ ಸ್ಥಳದಲ್ಲೇ ವಾಸ್ತವ್ಯ ಇದ್ದು, ಕದ ಸಂಖ್ಯೆಯನ್ನು ನೀಡಿರಲಿಲ್ಲ. ಬಳಿಕ ಮನೆ ನಿರ್ಮಾಣ ಮಾಡಿದ್ದು, ೨೦೧೫ರ ಹಿಂದೆ ವಾಸ್ತವ್ಯವಿಲ್ಲ ಎಂದು ಅವರ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಉಳಿದವರಿಗೆ ಅಡಿ ಸ್ಥಳ ಮಂಜೂರಾಗಿದೆ. ಈಗ ೩ಸಾವಿರ ಎಕರೆ ಜಾಗವನ್ನು ಅಳತೆ ಮಾಡಲು ಹೇಳಿಲ್ಲ ಎಂದರು.
ಪುತ್ರ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.
ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಮಾಹಿತಿ ನೀಡಿದ್ದು, ಈ ಬಗ್ಗೆ ಭರವಸೆಯಿತ್ತು. ಆದರೆ ಇದುವರೆಗೆ ಯಾವುದೇ ಕ್ರಮಕೈಗೊಳ್ಳದಿರುವುದು ಗಮನಿಸಿದೆ. ಬಡಕುಟುಂಬದ ನೋವಿಗೆ ಸ್ಪಂದಿಸುವುದು ನಮ್ಮ ಧರ್ಮ. ಸೋಮವಾರ ಅಧಿಕಾರಿಗಳನ್ನು ಕರೆಸಿ ಮಾತುಕತೆ ಮಾಡಲಾಗುವುದು. ಮನೆಯ ಅಡಿಸ್ಥಳವನ್ನು ಮಾಡಿಕೊಡುವ ಪ್ರಯತ್ನ ಮಾಡಲಾಗುವುದು. ಸರ್ಕಾರದಿಂದ ಬರುವ ಅನುದಾನದಲ್ಲಿ ಮನೆ ನಿರ್ಮಾಣ ವ್ಯವಸ್ಥೆ ಮಾಡಲಾಗುವುದು. ತಪ್ಪು ಮಾಡಿದ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲಾಗುವುದು.