ಬಿ.ಮೂಡ ಗ್ರಾಮದ ಗೋಳಿನೆಲ, ಕಲ್ಲಗುಡ್ಡೆ, ಪಲ್ಲಮಜಲು ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಪ್ಪು ಕಲ್ಲಿನ ಕ್ವಾರೆಯಿಂದ ಹಾನಿಗೊಳಗಾದ ಮನೆಗಳಿಗೆ ಗಣಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಬಂಟ್ವಾಳ: ಬಿ.ಮೂಡ ಗ್ರಾಮದ ಗೋಳಿನೆಲ, ಕಲ್ಲಗುಡ್ಡೆ, ಪಲ್ಲಮಜಲು ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಪ್ಪು ಕಲ್ಲಿನ ಕ್ವಾರೆಯಲ್ಲಿ ಸ್ಫೋಟಕ ಬಳಸುವುದರಿಂದ ಸುತ್ತಮುತ್ತಲಿನ ಮನೆಗಳಿಗೆ ತೀವ್ರ ಸ್ವರೂಪದ ಹಾನಿಯಾಗಿದೆ.
ಅದರ ಬಗ್ಗೆ ಗಣಿ ಇಲಾಖೆ, ತಹಸೀಲ್ದಾರ್, ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ತಹಸೀಲ್ದಾರ್ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಗುರುವಾರ ಗಣಿ ಹಾಗೂ ಭೂವಿಜ್ಞಾನ ಇಲಾಖೆ ಅಧಿಕಾರಿಗಳು, ಮೈನಿಂಗ್ ಇಂಜಿನಿಯರಿಂಗ್ ತಜ್ಞರು ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಣಿ ಇಲಾಖೆ ಅಧಿಕಾರಿಗಳಾದ ಡಾ.ಮಹದೇಶ್ವರ ಎಚ್.ಎಸ್., ಕಂದಾಯ ನಿರೀಕ್ಷಕ ವಿಜಯ ಕುಮಾರ್, ಬಂಟ್ವಾಳ ನಗರ ಪೊಲೀಸ್ ಠಾಣೆ ಪೊಲೀಸರು, ಬಿ. ಮೂಡದ ಗ್ರಾಮ ಆಡಳಿತ ಅಧಿಕಾರಿ ಉಪಸ್ಥಿತರಿದ್ದರು.