ಕಡಲಕೆರೆ ಪ್ರೇರಣಾ ಶಾಲೆಯಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ರಾಘವೇಂದ್ರ ಭಂಡಾರ್ಕರ್, ಎಂ.ಶಾಂತಾರಾಮ ಕುಡ್ವ, ವತ್ಸಲಾ ರಾಜೇಶ್, ಶಶಿಕಲಾ ಕೋಟ್ಯಾನ್ ಹಾಗೂ ಹರ್ಷಿತಾ ಉಪಸ್ಥಿತರಿದ್ದರು.  
ದಕ್ಷಿಣ ಕನ್ನಡ

ಪಠ್ಯ ಜ್ಞಾನದೊಂದಿಗೆ ಸಂಸ್ಕಾರಯುತ ಶಿಕ್ಷಣ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಮಕ್ಕಳಿಗೆ ಪಠ್ಯ ಪುಸ್ತಕದ ಜ್ಞಾನ ಮಾತ್ರವಲ್ಲದೆ ಸಂಸ್ಕಾರಯುತ ಶಿಕ್ಷಣ ನೀಡಿದಾಗ ಸತ್ ಪ್ರಜೆಗಳಾಗಿ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲು ಸಾಧ್ಯ ಎಂದು ಜ್ಯೋತಿಷಿ, ವಾಸ್ತು ತಜ್ಞ ಮಾರೂರು ರಾಘವೇಂದ್ರ ಭಂಡಾರ್ಕರ್ ಹೇಳಿದರು.
ಶತಮಾನೋತ್ಸವ ಸಂಭ್ರಮದಲ್ಲಿರುವ ಕಡಲಕೆರೆ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರಸ್ವತಿ ದೇವಿ, ಭಾರತ ಮಾತೆ ಹಾಗೂ ಓಂ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯಲಾಯಿತು. ಶಾಲಾ ಸಂಚಾಲಕ ಎಂ.ಶಾಂತಾರಾಮ ಕುಡ್ವ, ಶಿಕ್ಷಕಿಯರಾದ ಶಶಿಕಲಾ ಕೋಟ್ಯಾನ್ ಹಾಗೂ ಹರ್ಷಿತಾ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ವತ್ಸಲಾ ರಾಜೇಶ್ ಕಾರ್ಯಕ್ರಮ ನಿರ್ವಹಿಸಿದರು.
ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಸಂಹಿತಾ ಡಿ.ಪೈ(ದ್ವಿತೀಯ), ಓಂ ಶೆಟ್ಟಿ(ತೃತೀಯ), ಪ್ರಿಯಾ ಎಸ್.ಕೋಟ್ಯಾನ್(ಚತುರ್ಥ) ಬಹುಮಾನ ಪಡೆದರು. ರಾಜ್ಯಮಟ್ಟದಲ್ಲಿ ಆರಾಧ್ಯ ಶೆಟ್ಟಿ(ಪ್ರಥಮ), ಆಸ್ತಿಕ್ ನಾಯ್ಕ(ದ್ವಿತೀಯ), ಯದ್ವಿ(ತೃತೀಯ), ಮನ್ವಿತ್(ಚತುರ್ಥ) ಪ್ರಶಸ್ತಿ ಪಡೆದರು. ಜಿಲ್ಲಾಮಟ್ಟದಲ್ಲಿ ಆರಾಧ್ಯಪ್ರಭು(ದ್ವಿತೀಯ), ದೀಪಾಂಶ್ ಡಿ.ಆಚಾರ್ಯ(ತೃತೀಯ), ಮನಸ್ವೀ ಶರ್ಮಾ(ಚತುರ್ಥ), ಮನ್ವಿತಾ ಪೂಜಾರಿ(ಆರನೇ), ತಾಲೂಕು ಮಟ್ಟದಲ್ಲಿ ಸಮರ್ಥ ಡಿ.ಆಚಾರ್ಯ(ದ್ವಿತೀಯ), ಮನೀಷ್ ಪೂಜಾರಿ(ತೃತೀಯ) ಅವರನ್ನು ಗೌರವಿಸಲಾಯಿತು. ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಕಲಾ ಸಾಧಕ ಮತ್ತು ಕಲಾ ಪ್ರಭ ಸ್ವರ್ಣ ಪದಕಗಳನ್ನು ನೀಡಿ ಗೌರವಿಸಲಾಯಿತು.
ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಅತ್ಯುತ್ತಮ ಕ್ರಿಯಾಶೀಲತೆಗಾಗಿ ಲಭಿಸಿದ ರಾಷ್ಟ್ರಮಟ್ಟದ ಉತ್ತಮ ಶಾಲೆ ಪ್ರಶಸ್ತಿಯನ್ನು ಪ್ರೇರಣಾ ವಿದ್ಯಾಲಯದ ಪರವಾಗಿ ಮುಖ್ಯ ಶಿಕ್ಷಕಿ ವತ್ಸಲಾ ರಾಜೇಶ್ ಅವರಿಗೆ ಸಂಚಾಲಕ ಶಾಂತಾರಾಮ ಕುಡ್ವ ಹಸ್ತಾಂತರಿಸಿ ಗೌರವಿಸಿದರು.
------ಫೋಟೋ-------
ಎಂಬಿಡಿ_ಜನವರಿ27_6 ಪ್ರೇರಣಾ ಸ್ಕೂಲ್
ಕಡಲಕೆರೆ ಪ್ರೇರಣಾ ಶಾಲೆಯಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ರಾಘವೇಂದ್ರ ಭಂಡಾರ್ಕರ್, ಎಂ.ಶಾಂತಾರಾಮ ಕುಡ್ವ, ವತ್ಸಲಾ ರಾಜೇಶ್, ಶಶಿಕಲಾ ಕೋಟ್ಯಾನ್ ಹಾಗೂ ಹರ್ಷಿತಾ ಉಪಸ್ಥಿತರಿದ್ದರು.
********************