ಸಾಂಸ್ಕೃತಿಕ ಸ್ಪರ್ಧೆ ‘ಸಂಭ್ರಮ-2026’ಕ್ಕೆ ಸಿನಿಮಾ ಕಲಾವಿದ ಸತೀಶ್ ಬಂದಲೆ ಚಾಲನೆ ನೀಡಿದರು. ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಯಶ್ವಿನ್ ಕೆ.ಪಿ., ಅಪೇಕ್ಷಾ ಎಚ್.ಆಳ್ವ ಮತ್ತಿತರರು ಉಪಸ್ಥಿತರಿದ್ದರು. 
ದಕ್ಷಿಣ ಕನ್ನಡ

ಸಾಂಸ್ಕೃತಿಕ ಕಾರ್ಯಕ್ರಮ ನಮ್ಮ ಬೆಳವಣಿಗೆಗೆ ಪೂರಕ

Karthika K.S

ಪ್ರಮುಖ ಮುಖ್ಯಾಂಶಗಳು

  • ಸಾಂಸ್ಕೃತಿಕ ಸ್ಪರ್ಧೆ ‘ಸಂಭ್ರಮ-2026’
  • ಭವಿಷ್ಯದಲ್ಲಿ ಉತ್ತಮ ಅವಕಾಶ
ಉಳ್ಳಾಲ: ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಭವಿಷ್ಯದಲ್ಲಿ ಉತ್ತಮ ಅವಕಾಶ ಸೃಷ್ಟಿಸಿಕೊಳ್ಳಬಹುದು. ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಬೆಳವಣಿಗೆಗೆ ಪೂರಕ ಎಂದು ಸಿನಿಮಾ ಕಲಾವಿದ ಸತೀಶ್ ಬಂದಲೆ ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾಲಯ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ಆಶ್ರಯದಲ್ಲಿ ಮೂರು ದಿನ ನಡೆಯಲಿರುವ ಸಾಂಸ್ಕೃತಿಕ ಸ್ಪರ್ಧೆ ‘ಸಂಭ್ರಮ-2026’ಕ್ಕೆ ಬುಧವಾರ ಮಂಗಳ ಸಭಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದರು.
ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅಧ್ಯಕ್ಷತೆ ವಹಿಸಿ, ತುಳು ಸಿನಿಮಾ, ನಾಟಕಗಳು ಕೇವಲ ಮನರಂಜನೆ ಆಗಿರದೆ ಸಮಾಜಕ್ಕೆ ಸಂದೇಶ ಇರುವುದನ್ನು ಕೂಡಾ ಗಮನಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ನಡೆಯುವ ಇಂತಹ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ನಾವು ತೊಡಗಿಸಿಕೊಂಡು ಮುನ್ನಡೆಯಬೇಕು ಎಂದರು.
ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಯಶ್ವಿನ್ ಕೆ.ಪಿ., ಅಪೇಕ್ಷಾ ಎಚ್.ಆಳ್ವ, ನಿಹಾರ್ ಗಾಂವ್ಕರ್, ಮಿಲನ್ ಮುತ್ತಣ್ಣ, ಶ್ರೀಶ ಕೆ., ಕೇಸರಿ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗ ನಿರ್ದೇಶಕ ಡಾಮೋಹನ್ ಸಿಂಘೆ ಸ್ವಾಗತಿಸಿದರು. ಸಾಂಸ್ಕೃತಿಕ ಜತೆ ಕಾರ್ಯದರ್ಶಿ ಕೇಸರಿ ವಂದಿಸಿದರು. ಸಂಶೋಧನಾ ವಿದ್ಯಾರ್ಥಿನಿ ಕಾವ್ಯ ನಿರೂಪಿಸಿದರು.