ಕಬ್ಸ್-ಬುಲ್‌ಬುಲ್ ಉತ್ಸವ ಉದ್ಘಾಟನೆಯಲ್ಲಿ ಸಂತೋಷ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ, ಸುನೀಲ್ ಗಂಜಿಮಠ, ಭರತ್‌ರಾಜ್, ಸುರೇಶ್ ಶೆಟ್ಟಿ, ಜಯಲಕ್ಷ್ಮೀ, ಲತಾ, ಅಸುಂತಾ ಕ್ರಾಸ್ತಾ ಮೊದಲಾದವರು ಉಪಸ್ಥಿತರಿದ್ದರು. 
ದಕ್ಷಿಣ ಕನ್ನಡ

ಮಕ್ಕಳಲ್ಲಿ ಶಿಸ್ತಿನೊಂದಿಗೆ ದೇಶಪ್ರೇಮ ಬೆಳೆಸಲು ಸಹಕಾರಿ : ಸಂತೋಷ್ ಶೆಟ್ಟಿ

ಮೂಡುಶೆಡ್ಡೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಸಭಾಂಗಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಗುರುಪುರ ಸ್ಥಳೀಯ ಸಂಸ್ಥೆ ಎರಡು ದಿನಗಳ ವಾರ್ಷಿಕ ಕಬ್ಸ್-ಬುಲ್‌ಬುಲ್ ಉತ್ಸವ ಉದ್ಘಾಟನೆಯಲ್ಲಿ ಶನಿವಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದ.ಕ.ಜಿಲ್ಲಾ ಸಂಸ್ಥೆ ಸಹಾಯಕ ಸಂಘಟನಾ ಆಯುಕ್ತ ಭರತ್‌ರಾಜ್ ಮಾತನಾಡಿ, ಇಂಥ ಕಾರ್ಯಕ್ರಮ ಮೂಲಕ ಮಕ್ಕಳಿಗೆ ಉತ್ತಮ ತರಬೇತಿ ನೀಡಲಾಗುತ್ತಿದೆ. ಇದು ಅವರಿಗೆ ಭವಿಷ್ಯದಲ್ಲಿ ಜೀವನ ನಿರ್ವಹಿಸಲು ನೆರವಾಗಲಿದೆ ಎಂದರು.
ಗುರುಪುರ ಸ್ಥಳೀಯ ಸಂಸ್ಥೆ ಉಪಾಧ್ಯಕ್ಷ ಸುನೀಲ್ ಗಂಜಿಮಠ, ಮುಂಬೈ ಉದ್ಯಮಿ ಸುರೇಶ್ ಶೆಟ್ಟಿ ಮೊಗರುಗುತ್ತು, ಗುರುಪುರ ಸ್ಥಳೀಯ ಸಂಸ್ಥೆಯ ಶಿಬಿರದ ನಾಯಕಿ ಶಿಕ್ಷಕಿ ಅಸುಂತಾ ಕ್ರಾಸ್ತಾ, ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಪ್ರತಿನಿಧಿ ಸ್ವರ್ಣಲತಾ, ವಿವಿಧ ಶಾಲೆಗಳ 257 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.