ಮಂಗಳೂರು : ಬೋಳೂರು-ತಣ್ಣೀರುಬಾವಿ ಸೇತುವೆ ನಿರ್ಮಾಣ ಕಾಮಗಾರಿಯ ವೇಳೆ ಶುಕ್ರವಾರ ಕ್ರೇನ್ ನೀರಿಗೆ ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ.
ಬೆಳಗ್ಗೆ 9.20ರ ಸುಮಾರಿಗೆ ಸೇತುವೆಯ ಸ್ಲ್ಯಾಬ್ ಜೋಡಿಸಲು ಎರಡು ಕ್ರೇನ್ಗಳನ್ನು ಬಳಸಲಾಗುತ್ತಿತ್ತು. ಈ ವೇಳೆ ಒಂದು ಕ್ರೇನ್ ನೀರಿಗೆ ಉರುಳಿದೆ. ಸೇತುವೆ ನಿರ್ಮಾಣಕ್ಕಾಗಿ ಪಿಲ್ಲರ್ ಹಾಕಲಾಗಿದೆ. ಅದರ ಮೇಲಿನಿಂದ ಕಾಂಕ್ರೀಟ್ ಸ್ಲಾೃಬ್ ಜೋಡಣೆ ಕಾರ್ಯ ಆಗುತ್ತಿದೆ. ಈ ವೇಳೆ ಆಯ ತಪ್ಪಿ ಸ್ಲಾೃಬ್ ಜಾರಿದ್ದು, ಕ್ರೇನ್ ಸಹಿತ ನದಿ ನೀರಿಗೆ ಬಿದ್ದಿದೆ. ಈ ಸಂದರ್ಭ ಸ್ಲ್ಯಾಬ್ ಬೋಟ್ ಮೇಲೆ ಬಿದ್ದ ಪರಿಣಾಮ ಬೋಟ್ ಮುಳುಗಡೆಯಾಗಿದೆ. ಆದರೆ ಬೋಟ್ನಲ್ಲಿ ಯಾರೂ ಇಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ಕ್ರೇನ್ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.