ಬಿ.ಸಿ.ರೋಡಿನಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಹಾಗೂ ಬೆಳ್ಳಿಪ್ಪಾಡಿ ರಮಾನಾಥ ರೈ ಅವರನ್ನು ಅಭಿನಂದಿಸಲಾಯಿತು. 
ದಕ್ಷಿಣ ಕನ್ನಡ

ಹರಿಕೃಷ್ಣ ಪುನರೂರು, ರಮಾನಾಥ ರೈ ಸಮಾಜ ಸೇವೆ ಅಗಣಿತ : ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ

ಬದುಕು ಸೇವೆಗಾಗಿ ಇರುವುದು. ಅವಕಾಶ ಸಿಕ್ಕಾಗ ಪ್ರಾಮಾಣಿಕವಾಗಿ ಸೇವೆ ಮಾಡುವುದು ನಮ್ಮ ಕರ್ತವ್ಯ. ಜಾತಿ, ಧರ್ಮ ಮೀರಿ ಮನುಷ್ಯರಾಗಿ ಬಾಳಬೇಕೆನ್ನುವ ಆಶಯದೊಂದಿಗೆ ಭೇದ ರಹಿತವಾಗಿ ಬದುಕಿದ ಸಂತೃಪ್ತಿ ನನಗಿದೆ.

ನಾವೆಲ್ಲರೂ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ನಮ್ಮ ಸಂಪಾದನೆಯ ಬಹುಭಾಗವನ್ನು ಬಡವರ ಏಳಿಗೆಗೆ ನೀಡಿದಾಗ ಹೆಚ್ಚಿನ ಪುಣ್ಯ ಸಂಪಾದನೆಯಾಗುತ್ತದೆ. ರಮಾನಾಥ ರೈ ಜತೆ ಅಭಿನಂದನೆ ಸಿಕ್ಕಿರುವುದು ಖುಷಿ ಕೊಟ್ಟಿದೆ.