ಕಂಬಳ ತರಬೇತಿ ಶಿಬಿರದಲ್ಲಿ ಡಾ.ಪ್ರಭಾತ್ ಬಲ್ನಾಡ್, ಗುಣಪಾಲ ಕಡಂಬ, ನಿಹಾಲ್ ಶೆಟ್ಟಿ, ನವೀನ್ ಅಂಬೂರಿ, ರವೀಂದ್ರ ಶೆಟ್ಟಿ ಕುಕ್ಕುಂದೂರು ಮತ್ತಿತರರಿದ್ದರು.  
ದಕ್ಷಿಣ ಕನ್ನಡ

ಆತ್ಮವಿಶ್ವಾಸ, ನಾಯಕತ್ವ ಗುಣ ಮುಖ್ಯ

ಮುಂದಾಲೋಚನೆ, ಸಂವಹನ ಕೌಶಲ, ಆತ್ಮವಿಶ್ವಾಸ, ನಿರ್ಧಾರ ತೆಗೆದುಕೊಳ್ಳುವ ಗುಣ, ಜವಾಬ್ದಾರಿ, ಸಹಾನುಭೂತಿ, ನಿಷ್ಠೆ, ಸಮಸ್ಯೆ ಎದುರಿಸುವ ಸಾಮರ್ಥ್ಯ ಹಾಗೂ ಇನ್ನೊಬ್ಬರಿಗೆ ಸ್ಫೂರ್ತಿಯಾಗುವ ಗುಣ ಬೆಳೆಸಿಕೊಂಡರೆ ಉತ್ತಮ ನಾಯಕರಾಗಬಹುದು ಎಂದು ಜೈನ ಪ.ಪೂ. ಕಾಲೇಜು ಪ್ರಾಂಶುಪಾಲ ಡಾ.ಪ್ರಭಾತ್ ಬಲ್ನಾಡ್ ಹೇಳಿದರು.

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಮುಂದಾಲೋಚನೆ, ಸಂವಹನ ಕೌಶಲ, ಆತ್ಮವಿಶ್ವಾಸ, ನಿರ್ಧಾರ ತೆಗೆದುಕೊಳ್ಳುವ ಗುಣ, ಜವಾಬ್ದಾರಿ, ಸಹಾನುಭೂತಿ, ನಿಷ್ಠೆ, ಸಮಸ್ಯೆ ಎದುರಿಸುವ ಸಾಮರ್ಥ್ಯ ಹಾಗೂ ಇನ್ನೊಬ್ಬರಿಗೆ ಸ್ಫೂರ್ತಿಯಾಗುವ ಗುಣ ಬೆಳೆಸಿಕೊಂಡರೆ ಉತ್ತಮ ನಾಯಕರಾಗಬಹುದು ಎಂದು ಜೈನ ಪ.ಪೂ. ಕಾಲೇಜು ಪ್ರಾಂಶುಪಾಲ ಡಾ.ಪ್ರಭಾತ್ ಬಲ್ನಾಡ್ ಹೇಳಿದರು.

ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ಮಿಯಾರು ವತಿಯಿಂದ ಒಂಟಿಕಟ್ಟೆ ಕಡಲಕೆರೆ ಸೃಷ್ಟಿ ಗಾರ್ಡನ್‌ನಲ್ಲಿ ಏಳನೇ ವರ್ಷದ ಕಂಬಳ ತರಬೇತಿ ಶಿಬಿರದ ಮೂರನೇ ದಿನವಾದ ಸೋಮವಾರ ಸಭಾ ಕಾರ್ಯಕ್ರಮದಲ್ಲಿ ನಾಯಕನಿಗಿರುವ ಗುಣಲಕ್ಷಣಗಳ ಕುರಿತು ಮಾತನಾಡಿದರು.

ಕಂಬಳ ಅಕಾಡೆಮಿ ಸಂಚಾಲಕ ಗುಣಪಾಲ ಕಡಂಬ ಅಧ್ಯಕ್ಷತೆ ವಹಿಸಿದ್ದರು. ಸಿಟಿ ಲಯನ್ಸ್ ಕ್ಲಬ್ ಕಾರ್ಕಳ ಕಾರ್ಯದರ್ಶಿ ನಿಹಾಲ್ ಶೆಟ್ಟಿ, ಕಿಶೋರ್ ಹೊಸ್ಮಾರು, ಯೋಗ ತರಬೇತುದಾರ ನವೀನ್ ಅಂಬೂರಿ, ಉದ್ಘೋಷಕ ರವೀಂದ್ರ ಶೆಟ್ಟಿ ಕುಕ್ಕುಂದೂರು, ಮೂಡುಬಿದಿರೆ ಪ್ರೆಸ್ ಕ್ಲಬ್ ಕಾರ್ಯದರ್ಶಿ ಪ್ರೇಮಶ್ರೀ ಕಲ್ಲಬೆಟ್ಟು ಹಾಗೂ ಜ್ವಾಲಾ ಪ್ರಸಾದ್ ಉಪಸ್ಥಿತರಿದ್ದರು.

ಶಿಬಿರಾರ್ಥಿ ಉತ್ತಮ್ ತಂಡದ ವರದಿ ನೀಡಿದರು. ಕುಶ ತಂಡದ ಹರ್ಷಿತ್ ಶೆಟ್ಟಿ ಬಳಕುಂಜೆ ನಿರೂಪಿಸಿದರು. ದಿಗಂತ್ ಸಾಂತ್ಯ ವಂದಿಸಿದರು.