ಹಸಿರು ಕ್ರಿಯಾಸೇನೆ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ಸುಜ್ಞಾನಿ ಶ್ಯಾನುಭೋಗ್, ಜಯಾನಂದ ಕುವಾರ್, ಶಿವರಾಮ, ಶಿವಪ್ರಸಾದ್ ಎಚ್.ಸಿ. ಇತರರು ಉಪಸ್ಥಿತರಿದ್ದರು. 
ದಕ್ಷಿಣ ಕನ್ನಡ

ಕನ್ನಡ ಭಾಷೆ, ಸಂಸ್ಕೃತಿ ಉಳಿಸುವ ಉತ್ಸವಗಳು

ಕಾಸರಗೋಡು ದಸರೋತ್ಸವ ಸಮಾರೋಪ

ಕಾಸರಗೋಡು: ಗಡಿನಾಡಿನಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಇಂತಹ ಉತ್ಸವಗಳು ಮಹತ್ವದ ಪಾತ್ರ ವಹಿಸುತ್ತವೆ. ಸವಾಜಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುವ ಕಾಯಕಜೀವಿಗಳನ್ನು ಗುರುತಿಸಿ ಗೌರವಿಸುವುದು ಎಲ್ಲರ ಕರ್ತವ್ಯ ಎಂದು ದಾಸ ಸಂಕೀರ್ತನಕಾರ ಹರಿದಾಸ ಜಯಾನಂದ ಕುವಾರ್ ಹೇಳಿದರು.

ನಗರದ ಕೋಟೆಕಣಿಯಲ್ಲಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ವತಿಯಿಂದ ನಡೆದ ಕಾಸರಗೋಡು ದಸರೋತ್ಸವದ ಸವಾರೋಪ ಸವಾರಂಭದ ಅಧ್ಯಕ್ಷತೆ ವಹಿಸಿ ವಾತನಾಡಿದರು.

ಮುಖ್ಯ ಅತಿಥಿ ಬೆಂಗಳೂರು ಕನ್ನಡ ಕ್ರಿಯಾಸಮಿತಿ ಗೌರವಾಧ್ಯಕ್ಷ ಶಿವಪ್ರಸಾದ್ ಎಚ್.ಸಿ.ವಾತನಾಡಿ, ಮಧೂರು ಗ್ರಾಪಂ ಅಧ್ಯಕ್ಷೆ ಸುಜ್ಞಾನಿ ಶ್ಯಾನುಭೋಗ್ ವಾತನಾಡಿದರು.

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಶಿವರಾಮ ಕಾಸರಗೋಡು ಉಪಸ್ಥಿತರಿದ್ದರು. ನಗರದ ಸ್ವಚ್ಛತೆಗೆ ಶ್ರಮಿಸುತ್ತಿರುವ ನಗರಸಭೆ ಹಸಿರು ಕ್ರಿಯಾಸೇನೆ ಸಿಬ್ಬಂದಿ ಗಾಯತ್ರಿ ಕಿಣಿ, ಚಿತ್ರಾ ಬಿ., ಶಕುಂತಳಾ ಸಿ. ಮತ್ತು ಜಯಶ್ರೀ ಕೆ. ಅವರನ್ನು ಗೌರವಿಸಲಾಯಿತು.

ದಿವಾಕರ ಅಶೋಕ ನಗರ, ಸುನೀಲ್ ಕೋಲಾರ, ಗಣೇಶ ಆಚಾರ್ಯ ಮತ್ತು ಉದಯ ಆಚಾರ್ಯ ಕಾಳೆ ಅವರಿಂದ ಗಾಯನ ಕಾರ್ಯಕ್ರಮ ನಡೆಯಿತು. ಬಳಿಕ ಗುರುರಾಜ್ ಎಂ.ಆರ್. ಬಳಗ ಹಾಗೂ ಕಾಸರಗೋಡು ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ ಗೆಜ್ಜೆ ಹೆಜ್ಜೆ ನೃತ್ಯ ಕಾರ್ಯಕ್ರಮ ನಡೆಯಿತು. ಸಮಿತಿಯ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಸ್ವಾಗತಿಸಿದರು. ಶ್ರೀಷ ಜಿ.ಕೆ. ವಂದಿಸಿದರು. ಪತ್ರಕರ್ತ ಪುರುಷೋತ್ತಮ ಭಟ್ ಕೆ. ಕಾರ್ಯಕ್ರಮ ನಿರೂಪಿಸಿದರು.