ಶ್ರವಣ ಉಚಿತ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ವಿತರಣೆ ಕಾರ್ಯಕ್ರಮವನ್ನು ಲವ ಕುವಾರ್ ಉದ್ಘಾಟಿಸಿದರು. ಪ್ರಮುಖರಾದ ಸುಮಲತಾ ಹೆಬ್ಬಾರ್, ಸತೀಶ ಕುಲಾಲ್, ಡಾ.ಅಂಕಿತಾ ಮತ್ತಿತರರು ಉಪಸ್ಥಿತರಿದ್ದರು. 
ದಕ್ಷಿಣ ಕನ್ನಡ

ಈಶ್ವರ್ ಮಲ್ಪೆ ತಂಡದಿಂದ ಜನೋಪಯೋಗಿ ಸೇವೆ

ಹೆಬ್ರಿ: ಮಾಜ ಸೇವಕ ಈಶ್ವರ್ ಮಲ್ಪೆ ಅವರ ತಂಡದಿಂದ ನಿರಂತರವಾಗಿ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ವಿತರಣೆ ಕಾರ್ಯ ಜಿಲ್ಲಾದ್ಯಂತ ನಡೆಯುತ್ತಿರುವುದು ಶ್ಲಾನೀಯ. ಇದು ಅತ್ಯಂತ ಜನೋಪಯೋಗಿ ಸೇವೆ ಎಂದು ಹೆಬ್ರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೆರ್ಡೂರು ಸದಾಶಿವ ಸೇರ್ವೇಗಾರ್ ಹೇಳಿದರು.
ಹೆಬ್ರಿ ರೋಟರಿ ಸಮುದಾಯ ದಳದ ಕ್ಯಾಂಪ್‌ನಲ್ಲಿ ಮಂಗಳವಾರ ಟೀಮ್ ಈಶ್ವರ್ ಮಲ್ಪೆ ನೇತೃತ್ವದಲ್ಲಿ ಹೆಬ್ರಿ ರೋಟರಿ ಸಮುದಾಯದಳ, ಹೆಬ್ರಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂ, ಹೆಬ್ರಿ ಜೆಸಿಐ, ಹೆಬ್ರಿ ಗ್ರಾಮ ಪಂಚಾಯಿತಿ ಸಹಕಾರದಲ್ಲಿ ಶ್ರವಣ ಉಚಿತ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಟೀಮ್ ಈಶ್ವರ್ ಮಲ್ಪೆ ತಂಡದ ವ್ಯವಸ್ಥಾಪಕ ಲವ ಕುವಾರ್ ಕಾರ್ಯಕ್ರಮ ಉದ್ಘಾಟಿಸಿದರು. ಹೆಬ್ರಿ ರೋಟರಿ ಸಮುದಾಯದಳದ ಅಧ್ಯಕ್ಷ ಹೆಬ್ರಿ ರಾಮಕೃಷ್ಣ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಹೆಬ್ರಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂ ಕೋಶಾಧಿಕಾರಿ ಸುಮಲತಾ ಹೆಬ್ಬಾರ್, ಪ್ರಮುಖರಾದ ಸತೀಶ ಕುಲಾಲ್, ವೈದ್ಯೆ ಡಾ.ಅಂಕಿತಾ ಮತ್ತಿತರರು ಉಪಸ್ಥಿತರಿದ್ದರು. ಕೃಷ್ಣರಾಜ ಆಚಾರ್ಯ ನಿರೂಪಿಸಿದರು. ನಿತ್ಯಾನಂದ ಭಟ್ ವಂದಿಸಿದರು.