ಕಡಬ: ನೂಜಿಬಾಳ್ತಿಲ ಗ್ರಾಮದ ಕೈಪನಡ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಿ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ನಾಲ್ವರ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇಹಿ ಜಾರ್ಜ್ (44), ಜಾನ್ಸನ್, ಆಂಧ್ರಪ್ರದೇಶದ ರಾಜಪಲ್ಲಿ ಹರ್ಷವರ್ಧನ (25) ಹಾಗೂ ಕೂಡೂರು ಯೋಗಾನಂದ ಅಲಿಯಾಸ್ ರಾಮಚಂದ್ರ (28) ವಿರುದ್ಧ ಪ್ರಕರಣ ದಾಖಲಾಗಿದೆ. ಆಂಧ್ರದ ಕಾರಿನಲ್ಲಿ ಧರ್ಮಸ್ಥಳದಿಂದ ಬಂದಿದ್ದ ಪ್ರವಾಸಿಗರು ಶನಿವಾರ ಸಂಜೆ ಕೈಪನಡ್ಕದ ರಸ್ತೆ ಬದಿಯಲ್ಲಿರುವ ತೋಟದ ಅಡಿಕೆ ಹಾಗೂ ತೆಂಗಿನ ಗಿಡಗಳನ್ನು ತೆಗೆಯುತ್ತಿದ್ದರೆನ್ನಲಾಗಿದ್ದು, ಇದನ್ನು ಮೇಹಿ ಜಾರ್ಜ್ ಮತ್ತು ಜಾನ್ಸನ್ ತಡೆದಾಗ ಮಾತಿನ ಚಕಮಕಿ ನಡೆದು ಗಲಾಟೆ ಉಂಟಾಗಿದೆ.
ಬೀಟ್ ಸಿಬ್ಬಂದಿ ಸ್ಥಳಕ್ಕೆ ತೆರಳಿದಾಗ ನಾಲ್ವರು ಸಾರ್ವಜನಿಕ ರಸ್ತೆಯಲ್ಲಿ ಗಲಾಟೆ ನಡೆಸುತ್ತಿದ್ದರು. ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿ ತೊಂದರೆ ಉಂಟಾಗಿತ್ತು.