ಪಡುಮಾರ್ನಾಡು ತಂಡ್ರಕೆರೆ ಶಾಲೆಯಲ್ಲಿ ಮಕ್ಕಳ ಸಂತೆಯನ್ನು ಆಯೋಜಿಸಲಾಯಿತು. 
ದಕ್ಷಿಣ ಕನ್ನಡ

ಕಲಿಕೆಯೊಂದಿಗೆ ವ್ಯವಹಾರ ಪಾಠ : ತಂಡ್ರಕೆರೆ ಶಾಲೆಯಲ್ಲಿ ಮಕ್ಕಳ ಸಂತೆ

ಪ್ರಮುಖ ಮುಖ್ಯಾಂಶಗಳು

  • ವ್ಯಾಪಾರಿಗಳಾಗಿ ಸಂಭ್ರಮಿಸಿದ ವಿದ್ಯಾರ್ಥಿಗಳು
  • ತಂಡ್ರಕೆರೆ ಶಾಲೆಯಲ್ಲಿ ಮಕ್ಕಳ ಸಂತೆ

ಮಕ್ಕಳಿಂದಲೇ ವ್ಯವಹಾರ

ಮಕ್ಕಳ ಸಂತೆ ಹೊಸ ಅನುಭವ. ಪುಟ್ಟ ಸಂತೆಯಾದರೂ ಶಿಕ್ಷಕರು,ಪಾಲಕರ ಪ್ರೋತ್ಸಾಹದಿಂದ ಸಂಭ್ರಮಿಸಲು ಸಾಧ್ಯವಾಯಿತು. ಅಂಗಡಿಗಳ ನಿರ್ವಹಣೆ, ಲೆಕ್ಕಾಚಾರ, ಗ್ರಾಹಕರೊಂದಿಗಿನ ಮಾತುಕತೆ ಸಹಿತ ವಿವಿಧ ವಿಚಾರ ಕಲಿತೆವು.

ಶಿಕ್ಷಣವೆಂದರೆ ಕೇವಲ ಅಕ್ಷರ ಕಲಿಯುವುದಲ್ಲ, ಅದು ಮಗುವಿನ ಸರ್ವತೋಮುಖ ಬೆಳವಣಿಗೆ ಎಂಬುದನ್ನು ಸಾಬೀತುಪಡಿಸುವಂತೆ ಮಕ್ಕಳ ಸಂತೆ ಯಶಸ್ಸು ಕಂಡಿದೆ.

ಮಕ್ಕಳಲ್ಲಿ ಆತ್ಮವಿಶ್ವಾಸ ಹಾಗೂ ಸಂವಹನ ಕೌಶಲ ಹೆಚ್ಚಿಸಲು ಇಂತಹ ಚಟುವಟಿಕೆ ಪೂರಕ. ವ್ಯವಹಾರಿಕ ಜ್ಞಾನ ಬೆಳೆಸುವಲ್ಲಿಯೂ ಸಹಕಾರಿ. ಶಾಲೆಗಳು ಇಂತಹ ಕಾರ್ಯಕ್ರಮ ಹಮ್ಮಿಕೊಂಡಾಗ ಮಕ್ಕಳು ಲೋಕದ ಜ್ಞಾನ ಪಡೆಯುತ್ತಾರೆ.