ರೈಲ್ವೆ ಮಾರ್ಗವಾದ ಪರೆಲ್ ಮತ್ತು ಕರ್ರಿ ರೋಡ್ ನಿಲ್ದಾಣಗಳ ನಡುವೆ ಇರುವ ರೈಲು ಮೇಲ್ಸೇತುವೆ ತೆರವು ಕಾರ್ಯ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ರೈಲು ಸಂಚಾರ ಬದಲಾವಣೆ ಮಾಡಲಾಗಿದೆ.
ಮಂಗಳೂರು: ಕೇಂದ್ರ ರೈಲ್ವೆ ಇಲಾಖೆ ವತಿಯಿಂದ ಪ್ರಭಾದೇವಿ ವಿಶೇಷ ರೈಲು ಸಂಚಾರ ಮಾರ್ಗ ಹಾಗೂ ಪವರ್ ಬ್ಲಾಕ್ ಕಾಮಗಾರಿಗಳ ಹಿನ್ನೆಲೆಯಲ್ಲಿ ರೈಲ್ವೆ ಮಾರ್ಗವಾದ ಪರೆಲ್ ಮತ್ತು ಕರ್ರಿ ರೋಡ್ ನಿಲ್ದಾಣಗಳ ನಡುವೆ ಇರುವ ರೈಲು ಮೇಲ್ಸೇತುವೆ ತೆರವು ಕಾರ್ಯ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ರೈಲು ಸಂಚಾರ ಬದಲಾವಣೆ ಮಾಡಲಾಗಿದೆ.
ಮುಂಬೈ- ಸಿಎಸ್‌ಎಂಟಿ ಕಲ್ಯಾಣ ಜಂಕ್ಷನ್ ಮಾರ್ಗದ ಹಲವಾರು ರೈಲುಗಳ ಸಂಚಾರದಲ್ಲಿ ಕೇಂದ್ರ ರೈಲ್ವೆ ಬದಲಾವಣೆ ಮಾಡಿದೆ. ಏ.4 ರಿಂದ ಸಂಚರಿಸುವ ಕೆಲವು ರೈಲುಗಳು ಕೇಂದ್ರ ಸ್ಥಾನ ಮುನ್ನವೇ ನಿಲುಗಡೆಯಾಗಲಿವೆ. ಮಡಗಾಂವ್‌ಮುಂಬೈ ಸಿಎಸ್‌ಎಂಟಿ ಜನಶತಾಬ್ದಿ ಎಕ್ಸ್‌ಪ್ರೆಸ್, ತೇಜಸ್ ಎಕ್ಸ್‌ಪ್ರೆಸ್ ಮತ್ತು ಮಂಡೋವಿ ಎಕ್ಸ್‌ಪ್ರೆಸ್ ರೈಲುಗಳು ಪನವಲ್ ರೈಲ್ವೆ ನಿಲ್ದಾಣದಲ್ಲೇ ಕೊನೆಗೊಳ್ಳಲಿವೆ. ಮಂಗಳೂರು ಜಂಕ್ಷನ್‌ಮುಂಬೈ ಸಿಎಸ್‌ಎಂಟಿ ಎಕ್ಸ್‌ಪ್ರೆಸ್ ರೈಲು ಥಾಣೆ ನಿಲ್ದಾಣದಲ್ಲಿ ತನ್ನ ಪ್ರಯಾಣ ಕೊನೆಗೊಳಿಸಲಿದೆ. ಇದರ ಜೊತೆಗೆ ಕೆಲವು ರೈಲುಗಳು ಮುಂಬೈ ಸಿಎಸ್‌ಎಂಟಿ ಬದಲು ಪನವಲ್ ನಿಲ್ದಾಣದಿಂದಲೇ ಪ್ರಾರಂಭವಾಗಲಿವೆ.
ಕೊಂಕಣಕನ್ಯಾ ಎಕ್ಸ್‌ಪ್ರೆಸ್ (ಏ. 4) ಹಾಗೂ ಜನಶತಾಬ್ದಿ ಮತ್ತು ತೇಜಸ್ ಎಕ್ಸ್‌ಪ್ರೆಸ್ (ಏ.5) ರೈಲುಗಳು ಪನವಲ್ ನಿಲ್ದಾಣದಿಂದ ಹೊರಡಲಿವೆ. ಇದಲ್ಲದೆ ಮುಂಬೈಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ 15 ನಿಮಿಷ ತಡವಾಗಿ ಬೆಳಿಗ್ಗೆ 5.40ಕ್ಕೆ ಹೊರಡಲಿದೆ. ದಾದರ್‌ಸಾವಂತವಾಡಿ ತುತರೀ ಎಕ್ಸ್‌ಪ್ರೆಸ್ ಸುಮಾರು 385 ನಿಮಿಷ ತಡವಾಗಿ ಬೆಳಿಗ್ಗೆ 6:30ಕ್ಕೆ ಸಂಚರಿಸಲಿದೆ. ವಿಶೇಷ ರೈಲು ಮಂಡೋವಿ ಎಕ್ಸ್‌ಪ್ರೆಸ್ 40 ನಿಮಿಷ ತಡವಾಗಿ ಹೊರಡಲಿವೆ. ಮಡಗಾಂವ್ ಮುಂಬೈ ಕೊಂಕಣಕನ್ಯಾ ಎಕ್ಸ್‌ಪ್ರೆಸ್ ರೈಲು ದಿವಾ, ಥಾಣೆ ಹಾಗೂ ದಾದರ್ ನಿಲ್ದಾಣಗಳಲ್ಲಿ ಸುಮಾರು 30 ನಿಮಿಷಗಳಷ್ಟು ನಿಲುಗಡೆಯಾಗಲಿದೆ ಎಂದು ಕೇಂದ್ರ ರೈಲ್ವೆ ಇಲಾಖೆ ತಿಳಿಸಿದೆ.