ಕುಮಾರಧಾರಾ ನದಿಯಲ್ಲಿರುವ ದೇವರ ಮೀನುಗಳು. 
ದಕ್ಷಿಣ ಕನ್ನಡ

ಮತ್ಸ್ಯ ತೀರ್ಥದತ್ತ ದೇವರ ಮೀನುಗಳ ದಂಡು! : ಕುಕ್ಕೆ ಜಾತ್ರೆಗೆ ವಿಶೇಷ ಅತಿಥಿಗಳ ಆಗಮನ ನೈವೇದ್ಯ ಸ್ವೀಕರಿಸಿ ಸ್ವಸ್ಥಾನಕ್ಕೆ

ಸೌಮ್ಯ ಆರ್

ಮೀನುಗಳ ಗುಂಪು

ಕುಮಾರಧಾರಾದಲ್ಲಿರುವುದು ಪೂಜನೀಯ ಮೀನುಗಳಾಗಿವೆ. ಇವುಗಳು ಕುಮಾರಧಾರಾ ನದಿಯ ಇತರ ಕಡೆಗಳಲ್ಲಿ ಇರುತ್ತವೆ. ಜಾತ್ರೆ ವೇಳೆ ದೇವರ ಜಳಕದ ಗುಂಡಿಗೆ ಬರುತ್ತವೆ. ಈ ಪವಿತ್ರ ಮೀನುಗಳಿಗೆ ಶ್ರೀ ದೇವರ ಅವಭೃತ ಸ್ನಾನದ ಮೊದಲು ಅರ್ಚಕರು ಅಕ್ಕಿ ಹಾಕಿ ಆಹಾರ ನೀಡುತ್ತಾರೆ. ಬಳಿಕ ದೇವರ ತೆಪ್ಪೋತ್ಸವ ಮತ್ತು ಅವಭೃತ ಸ್ನಾನ ನೆರವೇರುತ್ತದೆ. ಜಾತ್ರೋತ್ಸವ ಕೊನೆಯಾದ ಬಳಿಕ ಪುರುಷರಾಯ ದೈವವು ಆಗಮಿಸಿ ಮೀನುಗಳಿಗೆ ಆಹಾರ ನೀಡುತ್ತದೆ.