ಜೆಪ್ಪಿನಮೊಗರಿನ ಇಂಡಿಯಾನಾ ಕನ್ವೆನ್ಷನ್ ಸೆಂಟರ್‌ನಲ್ಲಿ ಬೊನ್ ಮಸಾಲ ಬ್ರ್ಯಾಂಡ್‌ನ 40ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆ ಅದ್ಧೂರಿ ಕಾರ್ಯಕ್ರಮ ನಡೆಯಲಿದ್ದು, ಈ ಬಗ್ಗೆ ಸಂಸ್ಥೆಯ ಎಂಡಿ ಜೋಸೆಫ್ ಡಿಸಿಲ್ವಾ, ಮರಿಯೆಟ್ ಡಿಸಿಲ್ವಾ, ನಿರ್ದೆಶಕ ನಿಖಿಲ್ ಡಿಸಿಲ್ವಾ ಮಾಹಿತಿ ನೀಡಿದರು. ಸಂಸ್ಥೆಯ ಪ್ರಮುಖರಾದ ರೆನಿಶಾ ಸಿಕ್ವೇರಾ, ಕಾರ್ಯಕ್ರಮ ಸಂಯೋಜಕರಾದ ಅಮೃತಾ ನಾಯಕ್, ಪೃಥ್ವಿ ಕಾಮತ್ ಉಪಸ್ಥಿತರಿದ್ದರು. 
ದಕ್ಷಿಣ ಕನ್ನಡ

ನ.28ರಂದು ಬೊನ್ ಮಸಾಲ ಬ್ರ್ಯಾಂಡ್‌ನ 40ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆ

ಜೆಪ್ಪಿನಮೊಗರಿನ ಇಂಡಿಯಾನಾ ಕನ್ವೆನ್ಷನ್ ಸೆಂಟರ್‌ನಲ್ಲಿ ಅದ್ಧೂರಿ ಕಾರ್ಯಕ್ರಮ

ಮಂಗಳೂರು: ನಂಬಿಕೆ, ಸ್ವಾದ ಮತ್ತು ಒಗ್ಗಟ್ಟಿನ ಪಯಣ ಎಂಬ ಧ್ಯೇಯದೊಂದಿಗೆ ಯಶಸ್ವಿ ನಾಲ್ಕು ದಶಕಗಳನ್ನು ಪೂರೈಸಿರುವ ಮಂಗಳೂರಿನ ಹೆಮ್ಮೆಯ ಬೊನ್ ಮಸಾಲ ಬ್ರ್ಯಾಂಡ್‌ನ 40ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆ ನ.28ರ ಶನಿವಾರದಂದು ಆಯೋಜಿಸಲಾಗಿದೆ.

ಬುಧವಾರ ಪ್ರೆಸ್‌ಕ್ಲಬ್‌ನಲ್ಲಿ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬೊನ್ ಮಸಾಲ ಫುಡ್ಸ್ ಪೈ.ಲಿನ ಮುಖ್ಯಸ್ಥ ಜೋಸೆಫ್ ಡಿಸಿಲ್ವಾ, 1986ರಿಂದಲೂ ಗ್ರಾಹಕರ ವಿಶ್ವಾಸ ಗಳಿಸಿರುವ ಈ ಬ್ರ್ಯಾಂಡ್‌ನ ಮಹತ್ವದ ಮೈಲಿಗಲ್ಲನ್ನು ಸ್ಮರಣೀಯವಾಗಿಸಲು ಭವ್ಯ ಸಮಾರಂಭಕ್ಕೆ ಸಿದ್ಧತೆ ನಡೆದಿದೆ. ಮಂಗಳೂರಿನ ಜೆಪ್ಪಿನಮೊಗರಿನಲ್ಲಿರುವ ಇಂಡಿಯಾನಾ ಕನ್ವೆನ್ಷನ್ ಸೆಂಟರ್‌ನಲ್ಲಿ ಅಂದು ಬೆಳಿಗ್ಗೆ 10.30ರಿಂದ ಕಾರ್ಯಕ್ರಮಗಳು ಆರಂಭವಾಗಲಿವೆ. ನಾಲ್ಕು ದಶಕಗಳ ಈ ಸುದೀರ್ಘ ಪಯಣದಲ್ಲಿ ಜೊತೆಯಾದ ಎಲ್ಲಾ ಹಿತೈಷಿಗಳು, ಗ್ರಾಹಕರು ಹಾಗೂ ಪಾಲುದಾರರನ್ನು ಸಂಸ್ಥೆಯು ಈ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

1986ರಲ್ಲಿ ಒಂದು ಸಣ್ಣ ಗೃಹ ಕೈಗಾರಿಕೆಯಾಗಿ ಬೊನ್ ಮಸಾಲ ತನ್ನ ಪ್ರಯಾಣ ಆರಂಭಿಸಿ ಪ್ರತಿ ಮನೆಗೂ ಕರಾವಳಿಯ ಪಾರಂಪರಿಕ ಮಸಾಲೆಯ ಅಸಲಿ ಸ್ವಾದ ಮತ್ತು ಅಡುಗೆಯಲ್ಲಿ ಸುಲಭತೆಯನ್ನು ಒದಗಿಸುವ ಸರಳ ದೃಷ್ಟಿಕೋನದೊಂದಿಗೆ ಶುರುವಾದ ಈ ಉದ್ಯಮ, ಆರಂಭದಲ್ಲಿ ಸಾಂಬಾರ ಪದಾರ್ಥಗಳು ಮತ್ತು ಮಿಶ್ರಿತ ಮಸಾಲೆಗಳಲ್ಲಿ ಪರಿಣತಿ ಹೊಂದಿತ್ತು. ಆದರೆ ಇಂದು ನಿರಂತರ ಪರಿಶ್ರಮ ಹಾಗೂ ಗ್ರಾಹಕರ ಪ್ರೀತಿಯಿಂದಾಗಿ ಬೃಹತ್ ಮತ್ತು ವೈವಿಧ್ಯಮಯ ಆಹಾರ ಉತ್ಪಾದನಾ ಕಂಪನಿಯಾಗಿ ಬೆಳೆದು ನಿಂತಿದೆ ಎಂದರು.

ಸಂಸ್ಥೆಯ ನಿರ್ದೆಶಕ ನಿಖಿಲ್ ಡಿಸಿಲ್ವಾ ಮಾತನಾಡಿ, ಪ್ರತಿ ಅಡುಗೆಮನೆಗೂ ಗುಣಮಟ್ಟ ಮತ್ತು ಅನುಕೂಲತೆಯನ್ನು ತಲುಪಿಸುವ ಧ್ಯೇಯದೊಂದಿಗೆ ಆರಂಭವಾದ ಮಂಗಳೂರಿನ ಹೆಮ್ಮೆಯ ಬೊನ್ ಮಸಾಲ ಮತ್ತು ಆಹಾರ ಉತ್ಪನ್ನ ಸಂಸ್ಥೆಯು ತನ್ನ ಯಶಸ್ವಿ ಪ್ರಯಾಣದ 40 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. ಸಾಂಪ್ರದಾಯಿಕ ಮಸಾಲೆ ಶ್ರೇಣಿಯ ಜತೆಗೆ 92 ವಿವಿಧ ಉತ್ಪನ್ನಗಳ ಬೃಹತ್ ಶ್ರೇಣಿ ಗ್ರಾಹಕರಿಗೆ ನೀಡುತ್ತಿದೆ. ಇದರಲ್ಲಿ ಸಾಂಬಾರ ಪದಾರ್ಥಗಳು, ಮಿಶ್ರಿತ ಮಸಾಲೆಗಳು, ಸಾಸ್‌ಗಳು, ನೂಡಲ್ಸ್, ಸ್ನ್ಯಾಕ್ ಮಿಕ್ಸ್‌ಗಳು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಅಕ್ಕಿ ಶಾವಿಗೆ (ರೈಸ್ ವರ್ಮಿಸೆಲ್ಲಿ) ಸೇರಿದಂತೆ ಹಲವು ಜನಪ್ರಿಯ ಆಹಾರ ಉತ್ಪನ್ನಗಳು ಸೇರಿವೆ. ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಬೊನ್ ಸಂಸ್ಥೆಯ ಉತ್ಪಾದನಾ ಘಟಕಗಳಿದ್ದರೆ, ಯೆಯ್ಯಡಿ ಕೈಗಾರಿಕಾ ಪ್ರದೇಶದಲ್ಲಿ ಕೇಂದ್ರ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಈ ಮಹತ್ವದ ಸಂಭ್ರಮದ ಹೊತ್ತಿನಲ್ಲಿ ತನ್ನ ಉತ್ಪನ್ನಗಳ ಶ್ರೇಣಿಯನ್ನು ಮತ್ತಷ್ಟು ವಿಸ್ತರಿಸಲು ಯೋಜನೆ ರೂಪಿಸಿದೆ ಎಂದರು.

ಸಂಸ್ಥೆಯ ಪ್ರಮುಖರಾದ ರೆನಿಶಾ ಸಿಕ್ವೇರಾ ಮಾತನಾಡಿ, ಬೊನ್ ಮಸಾಲ ಸಂಸ್ಥೆಯನ್ನು ಇಬ್ಬರು ನಿರ್ದೇಶಕರಾದ ಜೋಸೆಫ್ ಡಿಸಿಲ್ವಾ ಮತ್ತು ನಿಖಿಲ್ ಡಿಸಿಲ್ವಾ ಅವರು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಸುಮಾರು 200 ಸಮರ್ಪಿತ ಉದ್ಯೋಗಿಗಳ ಬಲವನ್ನು ಹೊಂದಿರುವ ಈ ಸಂಸ್ಥೆಯು ತನ್ನ ಉತ್ಪಾದನಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುತ್ತಾ ಆಹಾರ ಉದ್ಯಮದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸುತ್ತಿದೆ. 40 ವರ್ಷಗಳ ಈ ಸುದೀರ್ಘ ಪ್ರಯಾಣದುದ್ದಕ್ಕೂ ಪ್ರತಿ ಉತ್ಪನ್ನದಲ್ಲೂ ಗುಣಮಟ್ಟ ಮತ್ತು ನೈಜ ರುಚಿಯನ್ನು ನೀಡುವ ಮೂಲಕ ಪ್ರತಿ ಮನೆಯ ಅಡುಗೆಯನ್ನು ಸರಳ, ಅನುಕೂಲಕರ ಮತ್ತು ಆನಂದದಾಯಕವಾಗಿಸುವುದು ಸಂಸ್ಥೆಯ ಏಕೈಕ ಗುರಿಯಾಗಿದೆ.

ಸಂಸ್ಥೆಯ ಪ್ರಮುಖರಾದ ರೆನಿಶಾ ಸಿಕ್ವೇರಾ, ಮರಿಯೆಟ್ ಡಿಸಿಲ್ವಾ, ಕಾರ್ಯಕ್ರಮ ಸಂಯೋಜಕರಾದ ಅಮೃತಾ ನಾಯಕ್, ಪೃಥ್ವಿ ಕಾಮತ್ ಉಪಸ್ಥಿತರಿದ್ದರು.

ಮಂಗಳೂರಿನ ರಾಷ್ಟ್ರೀಯ ಬ್ರ್ಯಾಂಡ್ ಬೊನ್ ಮಸಾಲ

ಉತ್ತಮ ಗುಣಮಟ್ಟ ಹಾಗೂ ರುಚಿಗೆ ಪ್ರಸಿದ್ದಿ ಪಡೆದ ಬೊನ್ ಮಸಾಲ ಮತ್ತು ಆಹಾರ ಉತ್ಪನ್ನವು ಈಗಾಗಲೇ ದೇಶಾಧ್ಯಂತ ಚಿಲ್ಲರೆ ಮಾರುಕಟ್ಟೆ ಹಾಗೂ ಆನ್‌ಲೈನ್ ಮಾರುಕಟ್ಟೆಯಲ್ಲೂ ಲಭ್ಯ. ಬೊನ್ ಮಸಾಲವು ಮಂಗಳೂರಿನ ರಾಷ್ಟ್ರೀಯ ಬ್ರ್ಯಾಂಡ್ ಆಗಿ ಬೆಳೆದಿರುವುದು ಹೆಮ್ಮೆ ಇದೆ. ಮುಂದೆ ತನ್ನ ಮಾರುಕಟ್ಟೆಯನ್ನು ವಿದೇಶಕ್ಕೂ ವಿಸ್ತರಿಸುವ ಯೋಜನೆಯಿದ್ದು, ಹಲವು ಹಂತದ ಪ್ರಕ್ರೀಯೆಗಳು ಪೂರ್ಣಗೊಂಡಿದೆ. ಗ್ರಾಹಕರ ಸಹಕಾರ ಹಾಗೂ ಬೆಂಬಲದಿಂದ ಬೊನ್ ಮಸಾಲವು ಮಂಗಳೂರಿನ ರಾಷ್ಟ್ರೀಯ ಬ್ರ್ಯಾಂಡ್ ಮಾಡಿದಂತೆ ಮುಂದೆ ಅಂತರಾಷ್ಟ್ರೀಯ ಬ್ರ್ಯಾಂಡ್ ಆಗಿ ವಿಸ್ತರಿಸುವ ಯೋಜನೆಯೂ ಕಾರ್ಯಗತಗೊಳ್ಳುತ್ತಿದೆ ಎಂದು ಸಂಸ್ಥೆಯ ನಿರ್ದೆಶಕ ನಿಖಿಲ್ ಡಿಸಿಲ್ವಾ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.