ಕಡಬದಲ್ಲಿ ಆಯೋಜಿಸಿದ್ದ ಬಿಲ್ಲವರ ಆಟಿ ಕೂಟದಲ್ಲಿ ಸಾಧಕರನ್ನು ಸನ್ಮಾನಿಸಲಾಯತು. ಪಿ.ವೈ.ಕುಸುಮಾ, ಸತೀಶ್ ಕೆ.ಐತ್ತೂರು, ಚಿದಾನಂದ ಸುವರ್ಣ, ಪುಷ್ಪಾವತಿ ಕೇಕುಡೆ ಇತರರಿದ್ದರು.
ಕಡಬ: ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘ ಕಡಬ ತಾಲೂಕು, ಬಿಲ್ಲವ ಮಹಿಳಾ ವೇದಿಕೆ ಆಶ್ರಯದಲ್ಲಿ ಯುವವಾಹಿನಿ ಕಡಬ ಘಟಕದ ಸಹಕಾರದೊಂದಿಗೆ ಬಿಲ್ಲವರ ಆಟಿ ಕೂಟ ಆಟೋಟ ಸ್ಪರ್ಧೆ, ಸನ್ಮಾನ ಕಾರ್ಯಕ್ರಮ ಕಡಬ ಅನುಗ್ರಹ ಸಭಾಭವನದಲ್ಲಿ ನಡೆಯಿತು.
ಆಟೋಟ ಸ್ಪರ್ಧೆಯನ್ನು ತಾಪಂ ಮಾಜಿ ಸದಸ್ಯೆ ಪಿ.ವೈ.ಕುಸುಮಾ ಉದ್ಘಾಟಿಸಿದರು. ಸಭಾ ಕಾರ್ಯಕ್ರಮವನ್ನು ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಬಿಲ್ಲವ ಸಂಘ ಕಡಬ ತಾಲೂಕು ಅಧ್ಯಕ್ಷ ಸತೀಶ್ ಕೆ.ಐತ್ತೂರು ಉದ್ಘಾಟಿಸಿದರು.
ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ಜಯಂತಿ ನಂದೋಳಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸರಿತಾ ಜನಾರ್ದನ ಬಿ.ಎಲ್. ಆಟಿ ಮಹತ್ವದ ಕುರಿತು ತಿಳಿಸಿಕೊಟ್ಟರು.
ಪುತ್ತೂರು ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಬಿಲ್ಲವ ಸಂಘ ಉಪಾಧ್ಯಕ್ಷ ಚಿದಾನಂದ ಸುವರ್ಣ, ಮಹಿಳಾ ವೇದಿಕೆ ಅಧ್ಯಕ್ಷೆ ಪುಷ್ಪಾವತಿ ಕೇಕುಡೆ, ಯುವವಾಹಿನಿ ಕಡಬ ಘಟಕದ ಅಧ್ಯಕ್ಷ ಉಮೇಶ್ ಬಳ್ಪ, ಕಾಮಧೇನು ಮಹಿಳಾ ಸಹಕಾರ ಸಂಘ ನೆಲ್ಯಾಡಿ ಅಧ್ಯಕ್ಷೆ ಉಷಾ ಅಂಚನ್, ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಕರ್ಕೇರ, ತುಳಸಿ ನಾಗೇಶ್ ಬಳ್ಪ ಉಪಸ್ಥಿತರಿದ್ದರು.
ಪ್ರಮೀಳಾ ನೆಕ್ಕಿಲಾಡಿ ಸ್ವಾಗತಿಸಿದರು. ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಬಿಲ್ಲವ ಮಹಿಳಾ ವೇದಿಕೆಯ ಕಾರ್ಯದರ್ಶಿ ಸುಚೇತಾ ಹಳೆನೆರೆಂಕಿ ವಂದಿಸಿದರು. ಕೃಷ್ಣಪ್ಪ ಅಮೈ, ಮಿಥುನ್ ಸುಂದರ ಪಲ್ಲತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.
ನಾಟಿ ವೈದ್ಯೆ ಬಾಲಕ್ಕ ಕೊರಪ್ಪಣೆ, ಬಳ್ಪ ಆರೋಗ್ಯ ಇಲಾಖೆಯ ಲೀಲಾವತಿ ಕೊಡಿಂಬಾಳ, ಧಾರ್ಮಿಕ ಕ್ಷೇತ್ರದ ಸೇವೆಗಾಗಿ ಇಂದಿರಾ ಬಸ್ತಿಕೊಡಿಂಕಿರಿ ಹಾಗೂ ಚಂದ್ರಾವತಿ ಶಾಂತಿಮೂಲೆ ಹಳೆನೇರಂಕಿ ಅವರನ್ನು ಸನ್ಮಾನಿಸಲಾಯಿತು.