ಕಾಸರಗೋಡು: ತ್ರಿಕ್ಕರಿಪುರ ರೈಲ್ವೆ ನಿಲ್ದಾಣ ಆವರಣದಲ್ಲಿ ಶಿಕ್ಷಕರೊಬ್ಬರ ಬೈಕ್ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಚಂದೇರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಂದೇರ ಠಾಣೆ ವ್ಯಾಪ್ತಿಯ ಶಬಾಸ್ (22), ಪಯ್ಯನ್ನೂರು ಠಾಣೆ ವ್ಯಾಪ್ತಿಯ ಮೊಹಮ್ಮದ್ ಸಾಬಿತ್ (21) ಹಾಗೂ ಫವಾಸ್ ಎ.ಟಿ.(21) ಬಂಧಿತರು.
ಇಳಂಬಜ್ಜಿ ತಳಿಚಾಲಂ ನಿವಾಸಿ ಶಿಕ್ಷಕ ಪಿ.ವಿ.ಪ್ರಶೋಭ್ ಅವರ ಬೈಕ್ ಸೆ.21ರಂದು ತ್ರಿಕ್ಕರಿಪುರ ರೈಲ್ವೆ ನಿಲ್ದಾಣದಲ್ಲಿ ಕಳವಾಗಿದ್ದು, ಈ ಬಗ್ಗೆ ಚಂದೇರ ಠಾಣೆಗೆ ದೂರು ನೀಡಿದ್ದರು.
ಸಿಸಿ ಕ್ಯಾಮರಾ ದೃಶ್ಯಾವಳಿ ಆಧಾರದಲ್ಲಿ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿ ವಿಚಾರಣೆಗೊಳಪಡಿಸಿದಾಗ ವಿವಿಧೆಡೆ ಕಳವುಗೈದ ಬೈಕ್‌ಗಳ ಬಿಡಿಭಾಗಗಳನ್ನು ಬೇರ್ಪಡಿಸಿ ಗುಜರಿ ಅಂಗಡಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ.
ಆರೋಪಿಗಳ ಪೈಕಿ ಮಹಮ್ಮದ್ ಸಾಬಿತ್ ವಿರುದ್ಧ ಬೆಂಗಳೂರಿನಲ್ಲಿ ಎಂಡಿಎಂಎ ಸಾಗಾಟ ಪ್ರಕರಣ ದಾಖಲಾಗಿದೆ.