crime 
ದಕ್ಷಿಣ ಕನ್ನಡ

ವಿದ್ಯುತ್ ಇಲಾಖೆಯ ಕೇಬಲ್ ಕಳವು

ಬದಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲು

ಕಾಸರಗೋಡು: ವಿದ್ಯುತ್ ಇಲಾಖೆಯ ಪೆರ್ಲ ಸೆಕ್ಷನ್ ಕಚೇರಿ ವ್ಯಾಪ್ತಿಯ ಎಣ್ಮಕಜೆ ಪಂಚಾಯಿತಿ ಗುಣಾಜೆ ಪರಿಸರದಲ್ಲಿ ಕೆಎಸ್‌ಇಬಿ ಕಾಮಗಾರಿಗಾಗಿ ತಂದಿಟ್ಟಿದ್ದ ಅಲ್ಯುಮೀನಿಯಂ ಕೇಬಲ್‌ಗಳನ್ನು ಕಳವುಗೈಯಲಾಗಿದೆ.

ಪೆರ್ಲ ವಿದ್ಯುತ್ ಸೆಕ್ಷನ್ ಅಸಿಸ್ಟೆಂಟ್ ಇಂಜಿನಿಯರ್ ನೀಡಿದ ದೂರಿನಂತೆ ಬದಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಂಡವೊಂದು ಪಿಕಪ್ ವಾಹನದಲ್ಲಿ ಕೇಬಲ್‌ಗಳನ್ನು ತೆಗೆದುಗೊಂಡು ಹೋಗಿರುವ ದೃಶ್ಯ ಪೊಲೀಸರಿಗೆ ದೊರೆತಿದೆ. ಕಳವಾದ ಸೊತ್ತುಗಳ ಮೌಲ್ಯ 4 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.