ಹರೀಶ್ ಕುಮಾರ್ 
ದಕ್ಷಿಣ ಕನ್ನಡ

ಕಾರು, ಸ್ಕೂಟರ್ ಡಿಕ್ಕಿ, ಯುವಕ ಮೃತ್ಯು

ಕಾರಿನಲ್ಲಿದ್ದ ಓರ್ವ ಪುರುಷ ಮತ್ತು ಮಹಿಳೆ ಗಾಯಗೊಂಡಿದ್ದು, ಇವರನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಿಂದ ಸ್ಕೂಟರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಸೋಮವಾರ ತಡರಾತ್ರಿ ಅಪಘಾತ ಸಂಭವಿಸಿದ್ದು, ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಹರೀಶ್ ಕುಮಾರ್ ಅವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಗ್ಗಿನ ಜಾವ ಮೃತಪಟ್ಟಿದ್ದಾರೆ.
ವೈದ್ಯರ ನಿರ್ಲಕ್ಷೃ ಆರೋಪಿಸಿ ಪ್ರತಿಭಟನೆ: ಹರೀಶ್ ಕುಮಾರ್ ಸಾವಿಗೆ ವೈದ್ಯರ ನಿರ್ಲಕ್ಷೃ ಕಾರಣ ಎಂದು ಆರೋಪಿಸಿ ಹರೀಶ್ ಕುಮಾರ್ ಅವರ ಮನೆಯವರು, ಪಕ್ಷದ ಕಾರ್ಯಕರ್ತರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು. ಮನೆಯವರ, ಪಕ್ಷದವರ ಆರೋಪ ಹಿನ್ನೆಲೆಯಲ್ಲಿ ಮೃತದೇಹದ ಉನ್ನತ ಶವಮಹಜರಿಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಯಿತು. ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.