ಪುತ್ತೂರು ಗ್ರಾಮಾಂತರ: ಸ್ಕೂಟರ್ ಮತ್ತು ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರ ಗಾಯಗೊಂಡ ಘಟನೆ ಮಾಡ್ನೂರು ಗ್ರಾಮದ ಕಾವು ಎಂಬಲ್ಲಿ ನಡೆದಿದೆ. ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ಸಣ್ಣಮೂಲೆ ನಿವಾಸಿ ಅಬ್ದುಲ್ ಕುಂಞಿ ಎಸ್. ಅವರ ತಂಗಿಯ ಪುತ್ರ ಮಹಮ್ಮದ್ ಮಸೂದ್ ಗಾಯಗೊಂಡವರು.
ಮಹಮ್ಮದ್ ಮಸೂದ್ ಕನಕಮಜಲಿನಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಸ್ಕೂಟರ್‌ಗೆ ಎದುರಿನಿಂದ ಬರುತ್ತಿದ್ದ ಕಾರು ಡಿಕ್ಕಿಯಾಗಿದೆ.
ರಸ್ತೆಗೆಸೆಯಲ್ಪಟ್ಟು ಗಾಯಗೊಂಡ ಮಹಮ್ಮದ್ ಮಸೂದ್ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಅಬ್ದುಲ್ ಕುಂಞಿ ನೀಡಿರುವ ದೂರಿನಂತೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.