ರಾಷ್ಟ್ರೀಯ ಹೆದ್ದಾರಿ 66ರ ಕಾರ್ನಾಡ್ ಕೊಕ್ಕರಕಲ್ ಬಳಿ ತಡೆಬೇಲಿಗೆ ಡಿಕ್ಕಿ ಹೊಡೆದು ನಿಂತ ಕಾರು.
ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಕಾರ್ನಾಡ್ ಕೊಕ್ಕರಕಲ್ ಬಳಿ ಹೆದ್ದಾರಿ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರಿಗೆ ಕಾರು ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ. ಚಿತ್ರಾಪು ಮರ್ಕಂಜ ನಿವಾಸಿ ವನಜ ಪುರುಷೋತ್ತಮ ಪೂಜಾರಿ(59) ಮೃತ ಮಹಿಳೆ.
ವನಜ ಕೊಕ್ಕರಕಲ್ ಬಳಿಯ ಹಾಲಿನ ಸೊಸೈಟಿಗೆ ಜೆಸಿಂತಾ ಮಚಾದೋ ಎಂಬುವರ ಜತೆ ನಡೆದುಕೊಂಡು ಹೋಗುತ್ತಿರುವಾಗ ಕಾರು ಡಿಕ್ಕಿ ಹೊಡೆದಿದ್ದು, ಹೆದ್ದಾರಿ ಬದಿಯ ಕಬ್ಬಿಣದ ತಡೆಬೇಲಿಗೆ ಗುದ್ದಿ ಹೊಡೆದು ನಿಂತಿದೆ. ಅಪಘಾತದ ರಭಸಕ್ಕೆ ವನಜಾ ಎಸೆಯಲ್ಪಟ್ಟಿದ್ದು, ಗಂಭೀರ ಗಾಯಗೊಂಡು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಜೆಸಿಂತಾ ಅವರಿಗೆ ಗಾಯಗಳಾಗಿದ್ದು, ಪವಾಡ ಸದೃಶ ಪಾರಾಗಿದ್ದಾರೆ.