ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ಜಾಗೃತಿ ಹೆಚ್ಚಿಸಿ, ಶೀಘ್ರ ಪತ್ತೆ ಮತ್ತು ತಡೆ ಎಂಬ ಶೀರ್ಷಿಕೆಯಲ್ಲಿ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮವನ್ನು ನಿಟ್ಟೆ ಉಷಾ ಇನ್ಸ್ಟಿಟ್ಯೂಟ್ ಆಫ್ ನಸಿರ್ಂಗ್ ಸೈನ್ಸಸ್‌ನ ಮೆಡಿಕಲ್ ಸರ್ಜಿಕಲ್ ನಸಿರ್ಂಗ್ ಡಿಪಾಟ್ಮೆರ್ಂಟ್ ವತಿಯಿಂದ ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಲಾಯಿತು.
ಮಂಗಳೂರು: ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ಜಾಗೃತಿ ಹೆಚ್ಚಿಸಿ, ಶೀಘ್ರ ಪತ್ತೆ ಮತ್ತು ತಡೆ ಎಂಬ ಶೀರ್ಷಿಕೆಯಲ್ಲಿ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮವನ್ನು ನಿಟ್ಟೆ ಉಷಾ ಇನ್ಸ್ಟಿಟ್ಯೂಟ್ ಆಫ್ ನಸಿರ್ಂಗ್ ಸೈನ್ಸಸ್‌ನ ಮೆಡಿಕಲ್ ಸರ್ಜಿಕಲ್ ನಸಿರ್ಂಗ್ ಡಿಪಾಟ್ಮೆರ್ಂಟ್ ವತಿಯಿಂದ ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ. ಶೇಷಪ್ಪ ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕ್ಯಾನ್ಸರ್ ಶೀಘ್ರ ಪತ್ತೆ ಹಾಗೂ ಜೀವನಶೈಲಿ ಬದಲಾವಣೆಗಳ ಮಹತ್ವವನ್ನು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿವರಿಸಿದರು.
ಈ ಜಾಗೃತಿ ಕಾರ್ಯಕ್ರಮದಲ್ಲಿ ಕೋಲೊರೆಕ್ಟಲ್, ಕಿಡ್ನಿ, ಓವೇರಿಯನ್, ಮತ್ತು ಪ್ರೋಸ್ಟೇಟ್ ಸೇರಿದಂತೆ ಪ್ರಮುಖ ಕ್ಯಾನ್ಸರ್‌ಗಳ ಬಗ್ಗೆ ವಿವರಿಸಲಾಯಿತು. ಮಾರ್ಚ್ ತಿಂಗಳು ಕ್ಯಾನ್ಸರ್ ಜಾಗೃತಿ ತಿಂಗಳಾಗಿ ಆಚರಿಸಲ್ಪಡುವ ಹಿನ್ನೆಲೆಯಲ್ಲಿ ಇದರ ಮಹತ್ವವನ್ನು ಒತ್ತಿಹೇಳಲಾಯಿತು. ಮೆಡಿಕಲ್ ಸರ್ಜಿಕಲ್ ನಸಿರ್ಂಗ್ ವಿಭಾಗದ ವೀರೇಶ್ ಕಡೆಮಣಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಕ್ಯಾನ್ಸರ್ ತಡೆ ಹಾಗೂ ಮುನ್ನೆಚ್ಚರಿಕೆ ಲಕ್ಷಣಗಳ ಬಗ್ಗೆ ಮಹತ್ವದ ಮಾಹಿತಿ ನೀಡಿದರು.
ಪಿಜಿ ನಸಿರ್ಂಗ್ ವಿದ್ಯಾರ್ಥಿನಿಯರಾದ ಸೋಬುಟಿಲಾ ಜಮೀರ್ ಮತ್ತು ಚಿರಶ್ರೀ ಅವರು ಕ್ರಮವಾಗಿ ಕೋಲೊರೆಕ್ಟಲ್, ಕಿಡ್ನಿ, ಓವೇರಿಯನ್ ಮತ್ತು ಪ್ರೋಸ್ಟೇಟ್ ಕ್ಯಾನ್ಸರ್‌ಗಳ ಬಗ್ಗೆ ಮಾಹಿತಿ ಪ್ರಧಾನ ಉಪನ್ಯಾಸಗಳನ್ನು ನೀಡಿದರು.
ಯೂತ್ ರೆಡ್ ಕ್ರಾಸ್ ಸಂಯೋಜಕ ಹೈದರಾಲಿ ಸೇರಿದಂತೆ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತಿತರಿದ್ದರು.