ಸುರತ್ಕಲ್ ಜಂಕ್ಷನ್‌ನಲ್ಲಿರುವ ಬೃಹತ್ ಬಹುಮಹಡಿ ಮಾರುಕಟ್ಟೆ ಕಟ್ಟಡ. 
ದಕ್ಷಿಣ ಕನ್ನಡ

ಕುಂಟುತ್ತ ಸಾಗಿದ ಮಾರುಕಟ್ಟೆ : ಸುರತ್ಕಲ್‌ನಲ್ಲಿ ಕಟ್ಟಡ ನಿರ್ಮಾಣ ವಿಳಂಬ ಕಾಮಗಾರಿ ಅವಧಿ ವಿಸ್ತರಣೆ ಸಾಧ್ಯತೆ

ಪ್ರಮುಖ ಮುಖ್ಯಾಂಶಗಳು

  • ಸುರತ್ಕಲ್‌ನಲ್ಲಿ ಕಟ್ಟಡ ನಿರ್ಮಾಣ ವಿಳಂಬ ಕಾಮಗಾರಿ ಅವಧಿ ವಿಸ್ತರಣೆ ಸಾಧ್ಯತೆ
  • ಜಿಎಸ್‌ಟಿ ನೀತಿಯಿಂದ ಕಟ್ಟಡ ನಿರ್ಮಾಣ ಕಾರ್ಯ ವಿಳಂಬ
  • ಮುಡಾ ಮಾರ್ಕೆಟ್ ಹೊರತುಪಡಿಸಿ ಬಹುತೇಕ ಎಲ್ಲ ತಡೆಗಳು ನಿವಾರಣೆ

ಮಾರುಕಟ್ಟೆ ಪ್ರಸ್ತಾವಕ್ಕೆ 2017ರಲ್ಲಿ ಅನುಮೋದನೆ

ಮೊದಿನ್ ಬಾವಾ ಶಾಸಕರಾಗಿದ್ದ 2017ರ ಹೊತ್ತಿಗೆ ಸುರತ್ಕಲ್ ಜಂಕ್ಷನ್‌ನಲ್ಲಿ ಹೊಸ ಮಾರುಕಟ್ಟೆ ನಿರ್ಮಿಸುವ ಪ್ರಸ್ತಾವಕ್ಕೆ ಸರ್ಕಾರದಿಂದ ಹಸಿರು ನಿಶಾನೆ ಸಿಕ್ಕಿತ್ತು. ಒಟ್ಟು 61 ಕೋಟಿ ರೂ. ವೆಚ್ಚದ ಯೋಜನೆ ಇದ್ದಾಗಿದ್ದು, 2018ರಲ್ಲಿ ಕಾಮಗಾರಿ ನಡೆಸಲು ಸರ್ಕಾರಿ ಆದೇಶ ಹೊರಬಿದ್ದಿತ್ತು. ಬೆಂಗಳೂರಿನ ಬಾಲಾಜಿ ಕೃಪಾ ಪ್ರಾಜೆಕ್ಟ್ ಸಂಸ್ಥೆ 2018ರಲ್ಲೇ ಕಾಮಗಾರಿ ಆರಂಭಿಸಿತ್ತು. 2019ರ ಹೊತ್ತಿಗೆ ಜಗತ್ತಿಗೆ ಕರೊನಾ ಮಹಾಮಾರಿ ಬಾಧಿಸಿದ ಸಂದರ್ಭದಲ್ಲಿ ಮಾರುಕಟ್ಟೆ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿತ್ತು. ಕರೊನಾದ ಬಳಿಕ ಕೇಂದ್ರ ಸರ್ಕಾರ ಹೊಸದಾಗಿ ಪರಿಚಯಿಸಿದ ಜಿಎಸ್‌ಟಿ ನೀತಿ ಸುರತ್ಕಲ್ ಮಾರುಕಟ್ಟೆ ನಿರ್ಮಾಣ ಕಾರ್ಯ ಅರ್ಧದಲ್ಲೇ ಸ್ಥಗಿತಗೊಳ್ಳುವಂತೆ ಮಾಡಿತ್ತು.

ಒಂದೂವರೆ ವರ್ಷಕ್ಕೆ ಪೂರ್ಣ

ಒಟ್ಟು 33 ಸಾವಿರ ಚದರ ಮೀಟರ್ ವಿಸ್ತೀರ್ಣದಲ್ಲಿ ಮಾರುಕಟ್ಟೆ ಕಟ್ಟಡ ನಿರ್ಮಾಣವಾಗುತ್ತಿದೆ. ಪರಿಷ್ಕೃತ ಟೆಂಡರ್‌ನನ್ವಯ ಮುಂದಿನ ಒಂದೂವರೆ ವರ್ಷದೊಳಗೆ(2026ರ ಆರಂಭದಲ್ಲಿ ಜೂನ್‌ನೊಳಗೆ) ಮರು ಕಾಮಗಾರಿ ಪೂರ್ಣಗೊಳ್ಳಬೇಕಿದೆ. ಪರಿಷ್ಕೃತ ದರ ಪಟ್ಟಿಯಲ್ಲಿ ಇದು ಒಟ್ಟು 81 ಕೋ. ರೂ. ವೆಚ್ಚದ ಪ್ರಾಜೆಕ್ಟ್ ಆಗಿದೆ. ಮೊದಲ ಹಂತದಲ್ಲಿ 16 ಕೋ.ರೂ. ಕಾಮಗಾರಿ ಮುಗಿದಿದ್ದರೆ, ಎರಡನೇ ಹಂತದಲ್ಲಿ 65 ಕೋ.ರೂ. ಕಾಮಗಾರಿ ನಡೆಯಬೇಕಿದೆ. ಆದರೆ ಟೆಂಡರ್ ಅವಧಿ ಮೀರಿ ಕಾಮಗಾರಿಯ ಅವಧಿ ವಿಸ್ತರಣೆಗೊಳ್ಳುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಕಟ್ಟಡದ ರಚನೆ

ಸುರತ್ಕಲ್ ಕೇಂದ್ರ ಭಾಗದಲ್ಲಿ ವಾಣಿಜ್ಯ ಸಂಕೀರ್ಣವಾಗಿ ತಲೆ ಎತ್ತಲಿರುವ ಬೃಹತ್ ಮಾರುಕಟ್ಟೆ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ. ಬೇಸ್ಮೆಂಟ್, ಒಂದು ಮತ್ತು 2ನೇ ಮಹಡಿಯ ಕೆಲಸ ಪೂರ್ಣಗೊಳಿಸುವಂತೆ ಸೂಚಿಸಿದ್ದೇನೆ. ಪ್ರಸಕ್ತ ಹೇಳಿಕೊಳ್ಳುವಂತಹ ತಾಂತ್ರಿಕ ಅಡಚಣೆಗಳು ಇಲ್ಲ. ಗಡುವಿನೊಳಗೆ(2026) ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ.