Bhupa stabbed in the neck in anger for not letting him look at the phone 
ದಕ್ಷಿಣ ಕನ್ನಡ

ಬೈಕ್ ತಡೆದು ಸಹೋದರರಿಂದ ಇರಿತ

ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲು

ಕಾಸರಗೋಡು: ನಾಲ್ವರು ಯುವಕರಿಗೆ ಇರಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಸಹೋದರರಾದ ಇರ್ಷಾದ್ ಮತ್ತು ದಿಲ್‌ಶಾದ್ ಎಂಬುವರ ವಿರುದ್ಧ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಇಚ್ಲಂಗೋಡು ಪಚ್ಚಂಬಳ ಸಫಾನಗರ ನಿವಾಸಿಗಳಾದ ಶರೀಫ್ ಎಸ್.ಎ. (36) ನವಾಜ್ (30), ಮಹಮ್ಮೂದ್ (30) ಮತ್ತು ರಶೀಕ್ (30) ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ನ.3ರಂದು ರಾತ್ರಿ ಇಚ್ಲಂಗೋಡು ಸಫಾನಗರದಲ್ಲಿ ಸ್ನೇಹಿತರಾದ ರಫೀಕ್, ಮಹಮ್ಮೂದ್, ನವಾಜ್ ಅವರ ಬೈಕ್ ತಡೆದು ನಿಲ್ಲಿಸಿ ಚಾಕುವಿನಿಂದ ಇರಿದು ಗಾಯಗೊಳಿಸಿ, ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂದು ಗಾಯಾಳು ಶರೀಫ್ ದೂರಿನಲ್ಲಿ ತಿಳಿಸಿದ್ದಾರೆ.

ಖಾತೆಯಿಂದ 1.3ಲಕ್ಷ ರೂ. ನಗದು ತೆಗೆದು ವಂಚನೆ

ಕಾಸರಗೋಡು: ಬ್ಯಾಂಕ್ ಖಾತೆಯಿಂದ ತನ್ನ ಅರಿವಿಗೆ ಬಾರದೆ 1.3 ಲಕ್ಷ ರೂ. ನಗದು ಹಿಂಪಡೆದಿರುವ ಬಗ್ಗೆ ಕಾಸರಗೋಡು ಬೀರಂತಬೈಲ್ ನಿವಾಸಿ ಸತೀಶ್ ಕುಮಾರ್ ನೀಡಿದ ದೂರಿನನ್ವಯ ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕೆನರಾ ಬ್ಯಾಂಕ್ ಖಾತೆಯಲ್ಲಿದ್ದ 1,33,300 ರೂ. ನಗದನ್ನು ಸೆ.4 ಹಾಗೂ 8ರ ಕಾಲಾವಧಿಯಲ್ಲಿ ಹಣ ಎಗರಿಸಲಾಗಿದೆ ಎಂದು ಸತೀಶ್‌ಕುಮಾರ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.