Death 
ದಕ್ಷಿಣ ಕನ್ನಡ

ಹಗ್ಗ ಕುತ್ತಿಗೆಗೆ ಸಿಲುಕಿ ಬಾಲಕ ಸಾವು

ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬಂಟ್ವಾಳ: ತಾಲೂಕಿನ ಕುಕ್ಕಿಪ್ಪಾಡಿಯಲ್ಲಿ ಆಟವಾಡುತ್ತಿದ್ದಾಗ ಮನೆಯ ಕಿಟಕಿಯಲ್ಲಿದ್ದ ಹಗ್ಗವೊಂದು ಕುತ್ತಿಗೆಗೆ ಸಿಲುಕಿ ಉಸಿರುಕಟ್ಟಿ ಒಂಬತ್ತು ವರ್ಷದ ಬಾಲಕ ಮೃತಪಟ್ಟಿದ್ದಾನೆ. ಆನಂದ ಪೂಜಾರಿ ಎಂಬುವರ ಪುತ್ರ, ಬಂಟ್ವಾಳ ಎಸ್‌ವಿಎಸ್ ಆಂಗ್ಲ ಮಾಧ್ಯಮ ಶಾಲೆಯ 3ನೇ ತರಗತಿ ವಿದ್ಯಾರ್ಥಿ ಅಮೃತ್ ಮೃತ ಬಾಲಕ.

ಭಾನುವಾರ ಮನೆಯಲ್ಲಿ ಆಟವಾಡುತ್ತಿದ್ದಾಗ ಕಿಟಕಿಯಲ್ಲಿದ್ದ ಹಗ್ಗ ಬಾಲಕನ ಕುತ್ತಿಗೆಗೆ ಸಿಲುಕಿಕೊಂಡಿತ್ತು. ಉಸಿರುಕಟ್ಟಿ ನರಳಾಡುತ್ತಿದ್ದ ಆತನನ್ನು ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.