ಕಾರ್ನಾಡು ಯೂತ್ ಫ್ರೆಂಡ್ಸ್ ಚಾರಿಟೆಬಲ್ ಟ್ರಸ್ಟ್‌ನ ಉದ್ಘಾಟನಾ ಸಮಾರಂಭ ಅಂಗವಾಗಿ ಬೃಹತ್ ರಕ್ತದಾನ ಶಿಬಿರ ಹಾಗೂ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. 
ದಕ್ಷಿಣ ಕನ್ನಡ

ಇನ್ನೊಂದು ಜೀವ ಉಳಿಸುವ ಕೆಲಸಕ್ಕೆ ಮಾನವೀಯ ಮೌಲ್ಯ : ರಿಯಾಝ್ ಫೈಝಿ ಎಂ.

ಕಾರ್ನಾಡು ಯೂತ್ ಫ್ರೆಂಡ್ಸ್ ಚಾರಿಟೆಬಲ್ ಟ್ರಸ್ಟ್‌ನ ಉದ್ಘಾಟನಾ ಸಮಾರಂಭ ಅಂಗವಾಗಿ ಜ.18ರಂದು ಬೃಹತ್ ರಕ್ತದಾನ ಶಿಬಿರ ಹಾಗೂ ಆರೋಗ್ಯ ತಪಾಸಣೆ ಉದ್ಘಾಟಿಸಿ ಮಾತನಾಡಿದರು.
ನೂತನ ಟ್ರಸ್ಟ್‌ನ್ನು ಬೊಳ್ಳೂರು ಉಸ್ತಾದ್ ಅಲ್ ಹಾಜ್ ಅಝ್ ಹರ್ ಪೈಝಿ ಉದ್ಘಾಟಿಸಿ ಮಾತನಾಡಿ, ಟ್ರಸ್ಟ್ ಮೂಲಕ ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಕ್ರಮ ನಿರಂತರ ನಡೆಯಲಿ ಎಂದರು.
ಡಾ.ಮಧುಕರ್ ರಕ್ತದಾನದ ಬಗ್ಗೆ ಮಾಹಿತಿ ನೀಡಿದರು. ಮೂಲ್ಕಿ ಶಾಫಿ ಜುಮ್ಮಾ ಮಸೀದಿ ಖತೀಬ ಅಲ್ ಹಾಜ್ ಉಸ್ಮಾನುಲ್ ಫೈಝಿ ತೊಡಾರ್, ಮೂಲ್ಕಿ ಶಾಫಿ ಜುಮ್ಮಾ ಮಸೀದಿ ಅಧ್ಯಕ್ಷ ಸುಹೈಲ್ ಹೈದರ್, ಮೂಲ್ಕಿ ನಪಂ ಮಾಜಿ ಸದಸ್ಯ ಪುತ್ತು ಬಾವ, ಹಸನ್ ಬಷೀರ್ ಕುಳಾಯಿ, ಮೂಲ್ಕಿ ಪೊಲೀಸ್ ಠಾಣೆಯ ಎಸ್‌ಐ ಉಮೇಶ್ ಕುಮಾರ್, ಅಲೌಹೀದ್ ಸಲಫಿ ಮಸೀದಿ ಅಧ್ಯಕ್ಷ ಮುಹಮ್ಮದ್, ಎಂ.ಎನ್.ಕಾರ್ನಾಡ್, ಡಿವೈಎಫ್‌ಐ ಘಟಕದ ಅಧ್ಯಕ್ಷ ಸಾಧಿಕ್ ಕಿಲ್ಪಾಡಿ, ಎಸ್‌ಡಿಪಿಐ ಮೂಲ್ಕಿ ಬ್ಲಾಕ್ ಅಧ್ಯಕ್ಷ ತೌಸೀಫ್ ಕೊಲ್ನಾಡು, ಕಾರ್ನಾಡ್ ಆಟೋ ಚಾಲಕ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಕಿರಣ್ ಶಿಮಂತೂರ್, ಮಸೀದಿ ಕಾರ್ಯದರ್ಶಿ ಫಾರೂಕ್ ಹಾಜಿ, ಜತೆ ಕಾರ್ಯದರ್ಶಿ ಇಬ್ರಾಹಿಂ ಹಾಜಿ, ಮಂಗಳೂರು ಬ್ಲಡ್ ಡೋನರ್ಸ್ ಸ್ಥಾಪಕ ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ, ಕಾರ್ಯನಿರ್ವಾಹಕ ತೌಫೀಕ್ ಕುಳಾಯಿ, ಕಾರ್ನಾಡು ಯೂತ್ ಫ್ರೆಂಡ್ಸ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಮುಹಮ್ಮದ್ ಅಶ್ರಫ್ ಉಪಸ್ಥಿತರಿದ್ದರು.