ACCIDENT 
ದಕ್ಷಿಣ ಕನ್ನಡ

ಪಿಕಪ್ ವಾಹನಕ್ಕೆ ಬೈಕ್ ಡಿಕ್ಕಿ, ಸವಾರ ಗಂಭೀರ

ಈಶ್ವರಮಂಗಲ-ಪುತ್ತೂರು ರಸ್ತೆಯಲ್ಲಿ ದುರ್ಘಟನೆ

ಪುತ್ತೂರು ಗ್ರಾಮಾಂತರ: ಬೈಕ್ ಮತ್ತು ಪಿಕಪ್ ವಾಹನದ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಗುರುವಾರ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಸಮೀಪ ಈಶ್ವರಮಂಗಲ-ಪಳ್ಳತ್ತೂರು ರಸ್ತೆಯಲ್ಲಿ ನಡೆದಿದೆ.

ಕಾವು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಈಶ್ವರಮಂಗಲ ಶಾಖೆ ಎದುರು ಭಾಗದಲ್ಲಿ ಬೈಕ್ ಎದುರಿನಿಂದ ಬಂದು ತಿರುವು ಪಡೆಯುತ್ತಿದ್ದ ಪಿಕಪ್‌ಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಬೈಕ್ ಸವಾರ ಬೆಳ್ಳಾರೆ ಸಮೀಪದ ಕೋಡಿಯಾಲ ನಿವಾಸಿ ಸುದೇಶ್ ಎಂಬುವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.