‘ಭಜೊರೇ ಮಾರುತಿ’ ಕುಣಿತ ಭಜನಾ ಸ್ಫರ್ಧೆಯ ಬಹುಮಾನ ವಿತರಿಸಲಾಯಿತು.
ಮಾರುತಿ ಜನಸೇವಾ ಸಂಘದ ಅಧ್ಯಕ್ಷ ಸಂದೀಪ್ ಪುತ್ರನ್ ಅಧ್ಯಕ್ಷತೆ ವಹಿಸಿದ್ದರು. ರಂಗಭೂಮಿ ಕಲಾವಿದ ನೀನಾಸಂ ಪದವೀಧರ ಶೀನ ನಾಡೋಳಿ, ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಯಶವಂತ್ ಪಿ.ಅಮೀನ್, ಶ್ರೀ ವ್ಯಾಘ್ರ ಚಾಮುಂಡೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ಸುರೇಂದ್ರ ಪುತ್ರನ್, ಚಿತ್ರನಟ ವಿಸ್ಮಯ ವಿನಾಯಕ್, ತಣ್ಣೀರುಬಾವಿ ಮೊಗವೀರ ಮಹಾಸಭಾ ಅಧ್ಯಕ್ಷ ಲೀಲಾಧರ ತಣ್ಣೀರುಬಾವಿ, ತೊಕ್ಕೊಟ್ಟು ಸಾಯಿ ಪರಿವಾರ್ ಟ್ರಸ್ಟ್ ಸ್ಥಾಪಕ ಟ್ರಸ್ಟಿ ಪ್ರವೀಣ್ ಎಸ್.ಕುಂಪಲ, ಮಾರುತಿ ಜನಸೇವಾ ಸಂಘದ ಪ್ರಧಾನ ಸಂಚಾಲಕ ಸುಧೀರ್ ವಿ.ಅಮೀನ್, ಗೌರವಾಧ್ಯಕ್ಷ ವರದರಾಜ್ ಬಂಗೇರ, ಪ್ರಧಾನ ಕಾರ್ಯದರ್ಶಿ ಕಪಿಲ್ ಬಂಗೇರ, ಕೋಶಾಧಿಕಾರಿ ಅನಿಲ್ ಚರಣ್, ಕ್ರೀಡಾ ಕಾರ್ಯದರ್ಶಿ ಮಹೇಶ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕರಾದ ಪ್ರಶಾಂತ್ ಬಿ.ಉಳ್ಳಾಲ್ ಸ್ವಾಗತಿಸಿದರು. ಸಾಹಿತಿ ಡಾ.ಅರುಣ್ ಉಳ್ಳಾಲ್ ನಿರೂಪಿಸಿದರು.
ಸಾಧಕರಿಗೆ ಅಭಿನಂದನೆ
ಕುಣಿತ ಭಜನೆಯನ್ನು ಕೇವಲ ಸ್ಪರ್ಧೆಗೆ ಮಾತ್ರ ಸೀಮಿತಗೊಳಿಸದೆ ನಮ್ಮ ಸುತ್ತಮುತ್ತಲಲ್ಲಿ ನಡೆಯುವ ಶುಭ ಕಾರ್ಯಗಳಿಗೂ ಪಸರಿಸಬೇಕು. ಮಹಿಳೆಯರು ಮಾತ್ರವಲ್ಲದೆ ಪುರುಷರೂ ಹೆಚ್ಚಿನ ಸಂಖ್ಯೆಯಲ್ಲಿ ಕುಣಿತ ಭಜನೆಯಲ್ಲಿ ಭಾಗವಹಿಸಬೇಕಿದೆ.