ಮಂಗಳೂರು: ಬೆಳ್ಳಾರೆ ಡಾ.ಕೆ.ಶಿವರಾಮ ಕಾರಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಬಾಲಸುಬ್ರಹ್ಮಣ್ಯ ಪಿ.ಎಸ್. ಅವರು ಮಂಡಿಸಿದ ‘ದಿ ಸ್ಟಡಿ ಆಫ್ ದ ಪಾಲಿಸಿಸ್ ಆ್ಯಂಡ್ ಪರ್ಸ್ಪೆಕ್ಟಿವ್ಸ್ ಆಫ್ ಟೋನಿ ಬ್ಲೇರ್ಸ್ ಲೇಬರ್ ಗವರ್ನಮೆಂಟ್ ಟವರ್ಡ್ಸ್ ಯುರೋಪಿಯನ್ ಯೂನಿಯನ್’ ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿದೆ.
ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಸಭಾಂಗಣದಲ್ಲಿ ನಡೆದ 44ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪಿಎಚ್ ಡಿ ಪ್ರದಾನ ಮಾಡಿದರು.
ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕ ಡಾ.ಜಯರಾಜ್ ಅಮೀನ್ ಮಾರ್ಗದರ್ಶನದಲ್ಲಿ ಈ ಮಹಾ ಪ್ರಬಂಧವನ್ನು ಸಿದ್ಧಪಡಿಸಿದ್ದರು.
ಬಾಲಸುಬ್ರಹ್ಮಣ್ಯ ಪಿ.ಎಸ್. ಅವರು ಪುತ್ತೂರು ಸಂಪ್ಯದ ನಿವಾಸಿ ನಿವೃತ್ತ ಸಹಾಯಕ ಪೊಲೀಸ್ ಉಪ ನಿರೀಕ್ಷಕ ಸದಾನಂದ ಪಿ. ಹಾಗೂ ರತ್ನಾವತಿ ದಂಪತಿ ಪುತ್ರ.