ಬೆಳ್ತಂಗಡಿ: ಗ್ರಾಮೀಣ ಪ್ರದೇಶದ ಜನರಿಗೆ ಪ್ರಾಥಮಿಕ ಹಂತದಲ್ಲೇ ಗುಣಮಟ್ಟದ ಆರೋಗ್ಯ ಸೇವೆ ಹಾಗೂ ಆರೋಗ್ಯ ಜಾಗೃತಿ ತಲುಪಿಸುವಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರಗಳು ಮಹತ್ವದ ಪಾತ್ರ ವಹಿಸಲಿವೆ. ಸುತ್ತಮುತ್ತಲ ಗ್ರಾಮಗಳು ಇವು ಹೆಚ್ಚಿನ ಪ್ರಯೋಜನ ನೀಡಲಿವೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಬುಧವಾರ ಬೆಳ್ತಂಗಡಿ ತಾಲೂಕಿನಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಶಾಸಕ ಹರೀಶ್ ಪೂಂಜ ಮಾತನಾಡಿ, ತಾಲೂಕಿನ ಅಭಿವೃದ್ಧಿಯ ಹಿತದೃಷ್ಟಿಯಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಹಲವಾರು ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ ಎಂದರು.
ಮುಖಂಡರಾದ ಸದಾನಂದ ಪೂಜಾರಿ, ಸಂತೋಷ್ ಕುಮಾರ್, ಸುರೇಶ್ ಪೂಜಾರಿ, ಬಾಲಕೃಷ್ಣ ಪೂಜಾರಿ, ಕರುಣಾಕರ ಹೆಗ್ಡೆ, ಸುರೇಶ್ ಶೆಟ್ಟಿ, ಶೋಭಾ ಕುಲಾಲ್, ದೇಜಪ್ಪ ಪೂಜಾರಿ, ವಿಶ್ವನಾಥ ಹೊಳ್ಳ, ಹೇಮಂತ್ ಕಟ್ಟೆ, ಶಿವಪ್ಪ ಪೂಜಾರಿ, ಸಂಪತ್ ಪಿ.ಕೋಟ್ಯಾನ್, ಪ್ರಶಾಂತ್ ದರ್ಖಾಸು, ಬೇಬಿ ಪರವ, ಗಿರೀಶ್, ಸೀತಾರಾಮ, ಸುಂದರ, ಮೋಹನ್ ಹೆಗ್ಡೆ, ಅಶೋಕ್ ಉಪಸ್ಥಿತರಿದ್ದರು.
ಬೆಳ್ತಂಗಡಿ ಜೂನಿಯರ್ ಕಾಲೇಜು, ಸವಣಾಲು, ತೆಂಕಕಾರಂದೂರು, ನಾಲ್ಕೂರು, ಕುದ್ಯಾಡಿ ಕಾರ್ಯಕ್ರಮಗಳಲ್ಲಿ ಸಂಸದ ಚೌಟ ಭಾಗವಹಿಸಿದ್ದರು. ಬಳಿಕ ಕುತ್ಲೂರು, ನಾರಾವಿ, ಕೊಕ್ರಾಡಿ, ಹೊಸಂಗಡಿ ಆರಂಬೋಡಿ, ಬಜಿರೆ, ವೇಣೂರು, ಗರ್ಡಾಡಿ ಕಾರ್ಯಕ್ರಮಗಳನ್ನು ಶಾಸಕ ಹರೀಶ್ ಪೂಂಜ ನಡೆಸಿಕೊಟ್ಟರು.
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಬೆಂಕಿ ಅವಘಡದ ವಿಚಾರ ತಿಳಿಯುತ್ತಿದ್ದಂತೆ ಸಂಸದ ಕ್ಯಾ.ಬ್ರಿಜೇಶ್ ಚೌಟ ತಮ್ಮ ಕಾರ್ಯಕ್ರಮವನ್ನು ಮೊಟಕುಗೊಳಿಸಿ ತಕ್ಷಣ ಮಂಗಳೂರಿಗೆ ತೆರಳಿದರು.