ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಹಲವಾರು ಸಂಘ-ಸಂಸ್ಥೆಗಳ, ಪೀಠಾಧೀಶರು, ಧರ್ಮಾಧಿಕಾರಿಗಳು, ಸ್ವಾಮೀಜಿಗಳ ಹಲವಾರು ವರ್ಷಗಳ ಕಲ್ಪನೆ, ಪ್ರಯತ್ನದಿಂದ ತುಳು ಭಾಷೆ ಮಾನ್ಯತೆ ಸಿಕ್ಕಿದ್ದು ಖಾದರ್ ಅವರು ಹೆಚ್ಚು ಪ್ರಯತ್ನ ಮಾಡಿದ್ದಾರೆ. ಮುಂದಕ್ಕೆ ಕೇಂದ್ರದಲ್ಲಿ ಎಂಟನೇ ಪರಿಚ್ಛೇಧಕ್ಕೆ ಸೇರುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಯಬೇಕಿದ್ದು ಡಾ.ಮೋಹನ್ ಆಳ್ವ ನೇತೃತ್ವದಲ್ಲೇ ನಡೆಯಲಿ ಎಂದು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅಭಿಪ್ರಾಯಪಟ್ಟರು.
ತುಳು ರಾಜ್ಯದ ಹೆಚ್ಚುವರಿ ಆಡಳಿತ ಭಾಷೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲು ಮುತುವರ್ಜಿ ವಹಿಸಿದ ಆರೋಗ್ಯ ಸಚಿವ ಯು.ಟಿ.ಖಾದರ್ ಅವರಿಗೆ ಗಟ್ಟಿ ಸಮಾಜ ಅಭಿನಂದನಾ ಸಮಿತಿ ವತಿಯಿಂದ ಮಂಗಳವಾರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಉದ್ಘಾಟಿಸಿದರು. ಗಟ್ಟಿ ಸಮಾಜ ಸೇವಾ ಸಂಘ ಅಧ್ಯಕ್ಷ ಜನಾರ್ದನ ಗಟ್ಟಿ ಕನ್ನಿಮನೆ ಅಧ್ಯಕ್ಷತೆ ವಹಿಸಿದ್ದರು. ಗಟ್ಟಿ ಸಮಾಜದ ನಾಯ್ಗರು ಹರೀಶ್ಚಂದ್ರ ಗಟ್ಟಿ ಬೊಂಬ್ಯಾಮನೆ, ಮೇಲ್ಡರಾದ ಯಾದವ ಗಟ್ಟಿ ಪಿಲಾರು, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್, ತುಳು ರಂಗಭೂಮಿ ಕಲಾವಿದ ಡಾ.ದೇವದಾಸ್ ಕಾಪಿಕಾಡ್, ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಎ.ಸಿ.ಭಂಡಾರಿ, ತುಳು ಪರಿಷತ್ ಅಧ್ಯಕ್ಷ ಶುಬೋಧಯ ಆಳ್ವ, ಜಿಲ್ಲಾ ಧಾರ್ಮಿಕ ಸಮಿತಿ ಸದಸ್ಯ ಸುರೇಶ್ ಭಟ್ನಗರ ಮೊದಲಾದವರು ಭಾಗವಹಿಸಿದ್ದರು. ಅಭಿನಂದನಾ ಸಮಿತಿ ಅಧ್ಯಕ್ಷೆ ಮಮತ ಗಟ್ಟಿ ಸ್ವಾಗತಿಸಿದರು.
ತುಳು ಎಂ.ಎ ಕಾರ್ಯಕ್ರಮ, ತುಳು ಭಾಷೆ ಪ್ರತ್ಯೇಕವಾಗಿದೆ. ಮಂಗಳೂರು ವಿವಿಯಲ್ಲಿ ತುಳು ಬೇಕೆಂದರೆ ತಕ್ಷಣ ಸರ್ಕಾರದಿಂದ ಅನುಮತಿ ನೀಡುವಂತೆ ಮಾಡುವ ಜವಾಬ್ದಾರಿ ಯು.ಟಿ.ಖಾದರ್ ಮೇಲಿದೆ. ತುಳು ಎಂ.ಎ.ಗೇ ಶೇ.50 ಶುಲ್ಕ ಕಡಿತ ಮಾಡಲು ಅನುಮತಿ ಕೇಳಲಾಗಿದೆ. ಜತೆಗೆ ಸಂಶೋಧನೆಗೆ ವಯಸ್ಸು ನೀಡದೆ ಅವಕಾಶ ನೀಡಲಾಗುವುದು.ಪ್ರೊ.ಪಿ.ಎಲ್.ಧರ್ಮ ಮಂಗಳೂರು ವಿವಿ ಕುಲಪತಿ