ಸಾಂದರ್ಭಿಕ ಚಿತ್ರ  
ದಕ್ಷಿಣ ಕನ್ನಡ

ಮೊಹಿದ್ದೀನ್ ನಾಸೀರ್ ಕೊಲೆ ಇಬ್ಬರು ಆರೋಪಿಗಳ ಬಂಧನ

ಮಂಗಳೂರು: ಮೀನುಗಾರಿಕ ದಕ್ಕೆಯ ಬಳಿ ನದಿಯಲ್ಲಿ ಬುಧವಾರ ಬೆಂಗರೆ ನಿವಾಸಿ ಮೊಹಿದ್ದೀನ್ ನಾಸೀರ್ (50) ಅವರ ಮೃತದೇಹ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪಾಂಡೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಒಡಿಶಾದ ದೀಪಕ್ (35) ಮತ್ತು ಬಿಹಾರ್ ನ ಮೊಹಮ್ಮದ್ ವಹಾಬ್ (38) ಬಂಧಿತ ಆರೋಪಿಗಳು. ಇವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಧೀಶರು ಎ.24ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಆರೋಪಿಗಳು ಮತ್ತು ನಾಸೀರ್ ನಡುವೆ ಮೊಬೈಲ್ ಕಳ್ಳತನದ ವಿಚಾರವಾಗಿ ಜಗಳವಾಗಿದೆ. ಈ ವೇಳೆ ಆರೋಪಿಗಳು ಅಲ್ಲೇ ಇದ್ದ ರಾಡ್ ನಿಂದ ನಾಸೀರ್ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ನದಿಗೆ ಎತ್ತಿ ಹಾಕಿ ಅಲ್ಲಿಂದ ತೆರಳಿದ್ದರು. ಪ್ರಕರಣ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಕಮಿಷನರ್ ತಿಳಿಸಿದ್ದಾರೆ.