ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಪ್ರಕೃತಿ ಚಿಕಿತ್ಸೆ ಮತ್ತು ಸೌಂದರ್ಯವರ್ಧಕ ಚಿಕಿತ್ಸೆಗಳ ಸಂಯೋಜನೆಯಿಂದ ಆರೋಗ್ಯ, ಆತ್ಮವಿಶ್ವಾಸ ಹಾಗೂ ಸಮಗ್ರ ಕ್ಷೇಮಕ್ಕೆ ಉತ್ತೇಜನ ನೀಡಬಹುದು. ಈ ಕ್ಷೇತ್ರವು ಸೌಂದರ್ಯಕ್ಕೆ ಸೀಮಿತವಾಗದೆ, ಆರೋಗ್ಯ ಮತ್ತು ಜೀವನಮಟ್ಟ ಸುಧಾರಿಸುವ ಸೇವಾ ಕ್ಷೇತ್ರವಾಗಿದೆ ಎಂದು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಆ್ಯಂಡ್ ವೆಲ್ನೆಸ್ ಹಾಗೂ ಚೆನ್ನೈನ ವಿಕೇರ್ ಪ್ರಭಾ ರೆಡ್ಡಿ ಬ್ಯೂಟಿ ಅಕಾಡೆಮಿಯ ಶೈಕ್ಷಣಿಕ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ರುಪತಿ ತಿಳಿಸಿದರು..
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಬಿಎನ್ವೈಎಸ್ ಪದವೀಧರರಿಗಾಗಿ ವಿಕೇರ್ ಸ್ಕಿನ್ ಆ್ಯಂಡ್ ಹೇರ್ ಕ್ಲಿನಿಕ್ಸ್ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು.
ಎಸ್ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಶಿವಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನ, ಶಿಸ್ತು ಮತ್ತು ವೃತ್ತಿಪರ ಕೌಶಲದ ಮೂಲಕ ಉದ್ಯೋಗ ಕ್ಷೇತ್ರದಲ್ಲಿ ಸಾಧನೆ ವಾಡಬೇಕು ಎಂದರು.
ವಿಕೇರ್ ಸ್ಕಿನ್ ಆ್ಯಂಡ್ ಹೇರ್ ಕ್ಲಿನಿಕ್ಸ್ ದಕ್ಷಿಣ ಭಾರತ ವಲಯದ ವಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಫಿರೋಜ್ ಶರ್ಮಿಳಾ, ಕಾಲೇಜಿನ ಉಪಪ್ರಾಂಶುಪಾಲೆ ಡಾ.ಸುಜಾತಾ ಕೆ.ಜೆ., ಪೌಷ್ಟಿಕಾಂಶ ಮತ್ತು ಆಹಾರ ಪದ್ಧತಿ ವಿಭಾಗದ ಡೀನ್ ಡಾ.ಬಿಂದು ಶ್ರೀಧರ್, ವಿಕೇರ್ ವಾನವ ಸಂಪನ್ಮೂಲ ವಿಭಾಗದ ನಿವೇದಿತಾ, ಮಂಗಳೂರಿನ ಹಿರಿಯ ಸಲಹಾ ತಜ್ಞೆ ಡಾ.ಸಾಯಿಲಕ್ಷ್ಮೀ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸಂಸ್ಕೃತಿ ಎಂ.ಜೈನ್ ನಿರೂಪಿಸಿದರು. ಮೂಲ ವಿಜ್ಞಾನ ವಿಭಾಗದ ಡೀನ್ ಡಾ.ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದರು.
ಕ್ಯಾಂಪಸ್ ನೇಮಾಕಾತಿಯಲ್ಲಿ ಭಾಗವಹಿಸಿದ್ದ ಒಟ್ಟು 89 ಅಭ್ಯರ್ಥಿಗಳಲ್ಲಿ 52 ಮಂದಿ ಆಯ್ಕೆಯಾಗಿದ್ದು, ಬಿಎನ್ವೈಎಸ್ ಪದವೀಧರರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.ಡಾ.ಶಿವಪ್ರಸಾದ್ ಶೆಟ್ಟಿ ಪ್ರಾಂಶುಪಾಲ