ಮೂಲ್ಕಿ: ಸಾಮಾಜಿಕ ಸಾಧಕರ ಜೀವನ ಚರಿತ್ರೆ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದು ಕೆನರಾ ಬ್ಯಾಂಕ್ ನಿವೃತ್ತ ಹಿರಿಯ ಪ್ರಬಂಧಕ ಕೆ.ಸತೀಶ್ ಭಂಡಾರಿ ಹೇಳಿದರು.
ಕಾರ್ನಾಡು ಶಾಖೆಯಲ್ಲಿ ಕೆನರಾ ಬ್ಯಾಂಕ್ ಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಜನ್ಮದಿನ ಆಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಪ್ರಬಂಧಕ ಅವರಾಲ್ ಶೇಷಗಿರಿ ರಾವ್, ಸಿಬ್ಬಂದಿ ಪ್ರೇಮಲತಾ ಶೆಟ್ಟಿ, ಅಶ್ವಿನಿ ಬಿ., ಪ್ರಕಾಶ್ ಟಿ.ಆರ್., ಮೇಘ ಹಾಗೂ ಗಣೇಶ್ ಉಪಸ್ಥಿತರಿದ್ದರು. ಬ್ಯಾಂಕ್‌ನ ಎಲ್ಲ ನಿವೃತ್ತರನ್ನು ಗೌರವಿಸಲಾಯಿತು. ಶಾಖಾ ಪ್ರಬಂಧ ಸುನೀಲ್ ಜಿ.ನಾಯಕ್ ಸ್ವಾಗತಿಸಿದರು. ಸುಮನ ಬಿ.ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.