ಅಳಿಕೆಯಲ್ಲಿ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿ ತರಬೇತಿದಾರ ಸೂರಜ್ ಕೆ.ಎಲ್. ಮಾತನಾಡಿದರು. ಡಾ.ವಿಕ್ರಮ್ ಶೆಟ್ಟಿ, ಬಸವರಾಜ್ ಎಸ್., ಎಸ್.ಚಂದ್ರಶೇಖರ ಭಟ್, ಹರಿಪ್ರಸಾದ್ ವಿ.ಎನ್. ಇದ್ದರು.
- ಸೂರಜ್ ಕೆ.ಎಲ್. ಕಿವಿಮಾತು
- ಅಳಿಕೆ ಸತ್ಯಸಾಯಿ ಸಂಸ್ಥೆಯಲ್ಲಿ ಧ್ವಜಾರೋಹಣ
ವಿಟ್ಲ: ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಶಿಕ್ಷಣ ಸಂಸ್ಥೆಯಲ್ಲಿ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟಿ ಕೆ.ಎಸ್.ಕೃಷ್ಣ ಭಟ್ ಧ್ವಜಾರೋಹಣ ನೆರವೇರಿಸಿದರು.
ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿ ತರಬೇತಿದಾರ ಸೂರಜ್ ಕೆ.ಎಲ್. ಮಾತನಾಡಿ, ಯಶಸ್ಸಿಗೆ ಶೇ.೯೦ರಷ್ಟು ನಮ್ಮ ಪರಿಶ್ರಮವಿರಬೇಕು. ಆಗ ಶೇ.೫ ಅದೃಷ್ಟ ಹಾಗೂ ಶೇ.೫ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದರು.
ಹಳೇ ವಿದ್ಯಾರ್ಥಿ ಡಾ.ವಿಕ್ರಮ್ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳು ‘ಐ’ ಯಿಂದ ‘ವಿ’ ಕಡೆಗೆ ಸಾಗಬೇಕು. ಆಳಿಕೆಯ ಮೌಲ್ಯಾಧಾರಿತ ಗುಣಮಟ್ಟದ ಶಿಕ್ಷಣದ ಮಹತ್ವವನ್ನು ಅರಿತು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ತಿಳಿಸಿದರು.
ನೀಟ್, ಜೆಇಇ, ಕೆಸಿಇಟಿ, ಸಿಎಲ್‌ಎಟಿ- ೨೦೨೬ರ ಸಾಧಕ ವಿದ್ಯಾರ್ಥಿಗಳ ಸನ್ಮಾನಿಸಲಾಯಿತು. ಮಾಜಿ ಸೇನಾಧಿಕಾರಿ ಕರ್ನಲ್ ಬಸವರಾಜ್ ಎಸ್., ಟ್ರಸ್ಟ್ ಕಾರ್ಯದರ್ಶಿ ಎಸ್.ಚಂದ್ರಶೇಖರ ಭಟ್, ಅಕಾಡೆಮಿಕ್ ಡೈರೆಕ್ಟರ್ ಹರಿಪ್ರಸಾದ್ ವಿ.ಎನ್., ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾಕೇಂದ್ರ ಪ್ರಾಂಶುಪಾಲ ಶಿವಕುಮಾರ್ ಸ್ವಾಗತಿಸಿದರು. ಪಿಯುಸಿ ವಿಭಾಗದ ಪ್ರಾಂಶುಪಾಲ ರಾಮಕೃಷ್ಣ ಪೈ ವಂದಿಸಿದರು.