ಮದ್ಯವರ್ಜನ ಶಿಬಿರದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿದರು.
ಮದ್ಯವ್ಯಸನಿ ಎಂದರೆ ಮದ್ಯದ ಅಮಲಿಗೆ ದಾಸರಾದವರು. ವ್ಯಸನವು ದೈಹಿಕ, ಸಾಮಾಜಿಕ ಮತ್ತು ಆರ್ಥಿಕ ಹಾನಿಯನ್ನುಂಟು ಮಾಡುತ್ತದೆ. ಕುಟುಂಬದವರು ಪ್ರೀತಿಯಿಂದ ವಂಚಿತರಾಗುತ್ತಾರೆ. ಆದ್ದರಿಂದ ದುಶ್ಚಟಮುಕ್ತ ಆರೋಗ್ಯವಂತ ಜೀವನದತ್ತ ಸಾಗಬೇಕಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ 264ನೇ ವಿಶೇಷ ಮದ್ಯವರ್ಜನ ಶಿಬಿರದಲ್ಲಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಮುಖ್ಯ ಹಣಕಾಸು ಅಧಿಕಾರಿಗಳಾದ ಶಾಂತಾರಾಮ್ ಆರ್. ಪೈ, ಡಾ.ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ, ಜನಜಾಗೃತಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾಸ್, ಆಡಳಿತ ಯೋಜನಾಧಿಕಾರಿ ಮಾಧವ ಗೌಡ, ಶಿಬಿರಾಧಿಕಾರಿ ಆರೋಗ್ಯ ಸಹಾಯಕ ಮತ್ತು ಜಾಗೃತಿ ಸೌಧದ ಪ್ರಬಂಧಕ ಕಿಶೋರ್ ಉಪಸ್ಥಿತರಿದ್ದರು.
ವ್ಯಸನಿಯು ತನ್ನ ಕುಟುಂಬಕ್ಕೆ ಖರ್ಚು ಮಾಡುವ ಮತ್ತು ಪ್ರೀತಿ ತೋರಿಸುವ ಬದಲು ತನ್ನ ಸ್ನೇಹಿತರಿಗೆ ಹೆಚ್ಚು ಖರ್ಚು ಮಾಡುತ್ತಾನೆ. ಮದ್ಯಪಾನಕ್ಕೆ ಬಲಿಯಾದವರನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಪರಿವರ್ತನೆ ಮಾಡುವಂತಹ ಕಾರ್ಯಕ್ರಮವೇ ಈ ಮದ್ಯವರ್ಜನ ಶಿಬಿರ. ಆದ್ದರಿಂದ ದುಶ್ಚಟ ಬಿಟ್ಟು ಎಲ್ಲರೂ ಆರೋಗ್ಯವಂತ ಜೀವನ ನಡೆಸಿರಿ.