ಸಾಂದರ್ಭಿಕ ಚಿತ್ರ 
ದಕ್ಷಿಣ ಕನ್ನಡ

ಲಾಠಿಯಿಂದ ಹೊಡೆದು ಮದ್ಯ ವ್ಯಸನಿಯ ಕೊಲೆ

ಮಂಗಳೂರು : ಕಾವಲುಗಾರನೋರ್ವ ಲಾಠಿಯಿಂದ ಹೊಡೆದು ವ್ಯಕ್ತಿಯೋರ್ವನನ್ನು ಕೊಲೆ ಮಾಡಿದ ಪ್ರಕರಣ ವೆನ್ಲಾಕ್ ಆಸ್ಪತ್ರೆಯ ಸಮೀಪ ಸಂಭವಿಸಿದೆ.
ವಾಮಂಜೂರಿನ ಪದ್ಮನಾಭ (42) ಕೊಲೆಯಾದವರು. ಘಟನೆ ಎ.26ರಂದು ಸಂಭವಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ವೆಂಕಟರಮಣ(50) ನನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವೆನ್ಲಾಕ್ ಆಸ್ಪತ್ರೆ ಪಕ್ಕದಲ್ಲಿರುವ ಮಸೀದಿಯಲ್ಲಿ ಕಾವಲುಗಾರನಾಗಿದ್ದ.
ಪದ್ಮನಾಭ ಮದ್ಯ ಸೇವಿಸಿ ಮಸೀದಿಯ ಪಾಕಿರ್ಂಗ್ ಸ್ಥಳದಲ್ಲಿದ್ದ ಆಟೋ ರಿಕ್ಷಾದಲ್ಲಿ ಕುಳಿತುಕೊಳ್ಳುತ್ತಿದ್ದ. ಇದಕ್ಕೆ ವೆಂಕಟರಮಣ ಆಕ್ಷೇಪ ವ್ಯಕ್ತಪಡಿಸುತ್ತಿದ್ದ. ಆದರೂ ಪದ್ಮನಾಭ ಮಾತು ಕೇಳುತ್ತಿರಲಿಲ್ಲ. ಇದರಿಂದ ತಾಳ್ಮೆ ಕಳೆದುಕೊಂಡ ವೆಂಕಟರಮಣ ತನ್ನ ಕೈಯಲ್ಲಿದ್ದ ಲಾಠಿಯಿಂದ ಹಲ್ಲೆ ನಡೆಸಿದ್ದಾನೆ. ಪರಿಣಾಮ ಸ್ಥಳದಲ್ಲೇ ಕುಸಿದು ಬಿದ್ದಿದ್ದ ಪದ್ಮನಾಭ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.