ಐಕಳೋತ್ಸವದಲ್ಲಿ ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಅವರನ್ನು ಗೌರವಿಸಲಾಯಿತು. ಶಾಸಕ ಉಮಾನಾಥ ಕೋಟ್ಯಾನ್, ಬಾಸ್ಕರ ಮೊಯ್ಲಿ, ಶಂಕರ ಶೆಟ್ಟಿ, ಕಂಬಳ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಐಕಳ ಬಾವ ಮತ್ತಿತರರು ಉಪಸ್ಥಿತರಿದ್ದರು.
ಐಕಳಬಾವ ಕಾಂತಾಬಾರೆ ಬೂದಾಬಾರೆ ಕಂಬಳ ಸಮಿತಿ ವತಿಯಿಂದ ನಡೆಯುತ್ತಿರುವ ಐಕಳೋತ್ಸವದಲ್ಲಿ ಮಾತನಾಡಿ, ಕಂಬಳ ಕೆಲ ವರ್ಷಗಳ ಹಿಂದೆ ನಿಂತು ಹೋಗುವ ಸಂದರ್ಭ ಬಂದಾಗ ಬೆಂಬಲ ನೀಡಿದ್ದೇವೆ. ಐಕಳ ದೇವಿ ಪ್ರಸಾದ್ ಶೆಟ್ಟಿ ಇಲ್ಲಿನ ಅಧ್ಯಕ್ಷರಾದ ನಂತರ ಕೇವಲ ಕಂಬಳವಾಗಿರದೆ ಐಕಳೋತ್ಸವವಾಗಿ ಹೊಸ ರೂಪ ಪಡೆದಿದೆ. ಸಂಪ್ರದಾಯಕ್ಕೆ ಚ್ಯುತಿ ಬರದಂತೆ ಆಧುನಿಕತೆಯ ಮೆರುಗಿನೊಂದಿಗೆ ಕಂಬಳ ನಡೆಯುತ್ತಿರುವುದು ಅಭಿನಂದನೀಯ ಎಂದರು.
ಕಂಬಳ ಸಮಿತಿ ವತಿಯಿಂದ ರಾಮಲಿಂಗಾರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ಶಾಸಕ ಉಮಾನಾಥ ಕೋಟ್ಯಾನ್, ಬಾಸ್ಕರ ಮೊಯ್ಲಿ, ಶಂಕರ ಶೆಟ್ಟಿ, ಕಂಬಳ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಐಕಳ ಬಾವ ಮತ್ತಿತರರು ಉಪಸ್ಥಿತರಿದ್ದರು.