ಮೂಡುಬಿದಿರೆ: ಅಗರಿ ಎಂಟರ್‌ಪ್ರೈಸಸ್ ವತಿಯಿಂದ ಹಮ್ಮಿಕೊಳ್ಳಲಾದ ‘ಹಬ್ಬಗಳ ಉತ್ಸವ’ ಬಹುಮಾನ ಕಾರ್ಯಕ್ರಮದ 8ನೇ ಹಂತದ 9ನೇ ಡ್ರಾ ಕಾರ್ಯಕ್ರಮ ಭಾನುವಾರ ಮೂಡಬಿದಿರೆಯ ಪ್ರೆಸ್ಟೀಜ್ ಟವರ್‌ನಲ್ಲಿ ಆಯೋಜಿಸಲಾಯಿತು.
ಎಸ್‌ಡಿಎಂ ಐ.ಟಿ.ಐ ಕಾಲೇಜಿನ ಉಪನ್ಯಾಸಕ ವೇಣೂರು ನಾಗೇಶ್ ಉಡುಪ, ಆಳ್ವಾಸ್ ಎಜುಕೇಶನ್ ಫೌಂಡೇಶನ್ ಪರ್ಚೇಸ್ ಆಫೀಸರ್ ಪ್ರಸಾದ್ ಎಸ್.ರಾವ್, ಶಿರ್ತಾಡಿ ಗ್ರಾಪಂ ಸದಸ್ಯ ಸಂತೋಷ್ ಅಂಚನ್, ಬಿಗ್ ಬ್ಯಾಗ್ ಕಂಪನಿ ಪ್ರೈ.ಲಿಮಿಟೆಡ್ ಗಂಜಿಮಠದ ಸೂಪರ್‌ವೈಸರ್ ಶ್ರೇಯಸ್ ಪೇರಿ, ಲಯನ್ಸ್ ಕ್ಲಬ್ ಸದಸ್ಯ ಸಿರಿಲ್ ಸೆರಾವೋ, ನಿವೃತ್ತ ಉಪನ್ಯಾಸಕ ಚಂದ್ರ ಕೆ.ಎಚ್., ಹ್ಯಾವೆಲ್ಸ್ ಫ್ಯಾನ್ ಡಿವಿಷನ್ ಮ್ಯಾನೇಜರ್ ಸಚಿನ್, ಪ್ರದೀಪ್ ಜೈನ್ ಹಾಗೂ ಕೋಸ್ಕಲ್ ಬ್ರೀಜ್ ಎಚ್.ವಿ.ಎ.ಸಿ ಸ್ಕೀಮ್‌ನ ಗಣೇಶ್ ಶೆಟ್ಟಿ ಅತಿಥಿಗಳಾಗಿದ್ದರು.
ಅಗರಿ ಎಂಟರ್‌ಪ್ರೈಸಸ್ ಮಾಲೀಕ ಅಗರಿ ರಾಘವೇಂದ್ರ ರಾವ್ ಅತಿಥಿಗಳನ್ನು ಗೌರವಿಸಿದರು. ಬಳಿಕ ಮಾತನಾಡಿದ ಅವರು, ಪ್ರತಿದಿನ ಒಂದು ಬಹುಮಾನ, 100 ದಿನ, 100 ಬಹುಮಾನ ಎಂಬ ವಿಶಿಷ್ಟ ಪರಿಕಲ್ಪನೆಯಡಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕಳೆದ ಡ್ರಾ ಕಾರ್ಯಕ್ರಮದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮೂಡಬಿದಿರೆ ಶಾಖೆ ಮ್ಯಾನೇಜರ್ ಸುನೀಲ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.