ಉಳ್ಳಾಲ ಕಡಲತೀರದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ಬ್ಲೂಲೈನ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಶೌಕತ್ ಶೌರಿ, ಮೀನುಗಾರಿಕಾ ಮಹಾವಿದ್ಯಾಲಯ ಡೀನ್ ಡಾ.ಎಚ್.ಎನ್.ಆಂಜನೇಯಪ್ಪ, ಅರ್ಥಶಾಸ್ತ್ರ ಅಂಕಿ ಅಂಶ ಮತ್ತು ವಿಸ್ತರಣಾ ವಿಭಾಗ ಮುಖ್ಯಸ್ಥ ಡಾ.ಶಿವಕುಮಾರ್ ಮಗದ ಉಪಸ್ಥಿತರಿದ್ದರು. 
ದಕ್ಷಿಣ ಕನ್ನಡ

ತ್ಯಾಜ್ಯದಿಂದ ಪರಿಸರದ ಮೇಲೆ ದುಷ್ಪರಿಣಾಮ

ಕಡಲತೀರ ಸ್ವಚ್ಛತಾ ಅಭಿಯಾನ

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ತ್ಯಾಜ್ಯ ಕಡಲು ಸೇರಿದರೆ ಸಮುದ್ರ ಜೀವಿಗಳು ಹಾಗೂ ಪರಿಸರದ ಮೇಲೆ ದುಷ್ಪರಿಣಾಮ ಬೀರುವುದರಿಂದ ಇವೆರಡೂ ಪ್ರದೇಶಗಳ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ, ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಬ್ಲೂಲೈನ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಶೌಕತ್ ಶೌರಿ ಅಭಿಪ್ರಾಯಪಟ್ಟರು.

ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನ-2026 ಪ್ರಯುಕ್ತ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ವಿಭಾಗ, ಬ್ಲೂಲೈನ್ ಫುಡ್ಸ್ ಇಂಡಿಯಾ ಸಂಸ್ಥೆ ಹಾಗೂ ಅರೇಬಿಯನ್ ಸೀ ಫಿಶರೀಸ್ ಮ್ಯಾನೇಜ್‌ಮೆಂಟ್ ಕೋಆರ್ಡಿನೇಷನ್ ಕಮಿಟಿ ಸಹಯೋಗದಲ್ಲಿ ಉಳ್ಳಾಲ ಕಡಲತೀರದಲ್ಲಿ ಭಾನುವಾರ ಆಯೋಜಿಸಲಾದ ಸ್ವಚ್ಛತಾ ಅಭಿಯಾನದಲ್ಲಿ ಮಾತನಾಡಿದರು.

ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಡಾ.ಎಚ್.ಎನ್.ಆಂಜನೇಯಪ್ಪ, ಅರ್ಥಶಾಸ್ತ್ರ ಅಂಕಿ ಅಂಶ ಮತ್ತು ವಿಸ್ತರಣಾ ವಿಭಾಗದ ಮುಖ್ಯಸ್ಥ ಡಾ.ಶಿವಕುಮಾರ್ ಮಗದ ಮಾತನಾಡಿದರು. ಮೀನುಗಾರಿಕಾ ಇಲಾಖೆ ನಿರ್ದೇಶಕ ದಿನೇಶ್ ಕುಮಾರ್ ಕಲ್ಲೇರ್, ಕೆವಿಎಎಫ್‌ಎಸ್‌ಯು ವಿಸ್ತರಣಾ ನಿರ್ದೇಶಕ ಡಾ.ಎಸ್.ಆರ್.ಸೋಮಶೇಖರ್, ಬ್ಲೂಲೈನ್ ಸಂಸ್ಥೆ ನಿರ್ದೇಶಕ ಮಹಮ್ಮದ್ ಫಕೀರ್ ಹುಸೈನ್, ಉಳ್ಳಾಲ ನಗರಸಭೆ ಮಾಜಿ ಸದಸ್ಯ ಜಬ್ಬಾರ್, ಉಳ್ಳಾಲ ಮೊಗವೀರ ಸಂಘ ಅಧ್ಯಕ್ಷ ಯಶವಂತ್ ಅಮೀನ್ ಮೊದಲಾದವ್ಟ್ಠ ಉಪಸ್ಥಿತರಿದ್ದರು.