ಬಹು ಭಾಷಾ ನಟಿ ಶಾನ್ವಿ ಶ್ರೀವಾಸ್ತವ್ ನೂತನ ಮಳಿಗೆಯನ್ನು ಉದ್ಘಾಟಿಸಿದರು.
ಮಂಗಳೂರು: ಆದಿತ್ಯ ಬಿರ್ಲಾ ಸಂಸ್ಥೆಯ ಜ್ಯುವೆಲ್ಲರಿ ಮಳಿಗೆ ‘ಇಂದ್ರಿಯಾ’ ಕಂಕನಾಡಿ ಬಳಿಯ ಅಪ್ಪರ್ ಬೆಂದೂರ್‌ವೆಲ್‌ನಲ್ಲಿ ಶನಿವಾರ ಉದ್ಘಾಟನೆಗೊಂಡಿತು.
ಬಹು ಭಾಷಾ ನಟಿ ಶಾನ್ವಿ ಶ್ರೀವಾಸ್ತವ್ ನೂತನ ಮಳಿಗೆಯನ್ನು ಉದ್ಘಾಟಿಸಿದರು. ಶ್ರೀಮಂತ ಸಂಸ್ಕೃತಿಯನ್ನು ಹೊಂದಿರುವ ಕರಾವಳಿ ಜನತೆಗೆ ಚಿನ್ನಾಭರಣ ಖರೀದಿಗೆ ಇಂದ್ರಿಯಾ ಜ್ಯುವೆಲ್ಲರಿ ಹೊಸ ಅವಕಾಶ ಕಲ್ಪಿಸಿದೆ. ಪರಂಪರೆಯ, ವಿಫುಲ ವಿನ್ಯಾಸದ ಆಯ್ಕೆಗೆ ಸಕಾಲ. ದಕ್ಷಿಣ ಭಾರದ ದೊಡ್ಡ ಮಾರುಕಟ್ಟೆಯನ್ನು ಹೊಂದಿರುವ ಸಂಸ್ಥೆ ಮಂಗಳೂರಿನಲ್ಲೂ ನಗು ಮೊಗದ ಸೇವೆಯೊಂದಿಗೆ ಯಶಸ್ಸು ಗಳಿಸಲಿ ಎಂದು ಹಾರೈಸಿದರು.
ಸಂಸ್ಥೆಯ ರಿಟೈಲ್ ಹೆಡ್ ಅಮಿತ್ ಧರಪ್ ಮಾತನಾಡಿ, ಮಂಗಳೂರಿನಲ್ಲಿ ಉದ್ಘಾಟನೆಗೊಂಡ ಇಂದ್ರಿಯಾ 39ನೇ ಮಳಿಗೆಯಾಗಿದೆ. ಗ್ರಾಹಕರಿಗೆ ಚಿನ್ನ ಹಾಗೂ ವಜ್ರಾಭರಣ ಖರೀದಿಗೆ ಶೇ.30ರಷ್ಟು ದರ ಕಡಿತ ಮತ್ತು ಹಳೇ ಚಿನ್ನದ ಮೇಲೆ ಶೇ.0 ಕಡಿತ ಕೊಡುಗೆ ನೀಡಲಾಗಿದೆ. 28,000 ಕ್ಕೂ ಹೆಚ್ಚು ವಿನ್ಯಾಸಗಳ ಪ್ರದರ್ಶನವಿದೆ ಎಂದರು.
ಎ.ಜೆ.ಸಮೂಹ ಸಂಸ್ಥೆಗಳ ಮುಖ್ಯಸ್ಥ ಎ.ಜೆ.ಶೆಟ್ಟಿ, ಕಟ್ಟಡದ ಮಾಲೀಕ ಪ್ರಭಾಕರ ಶೆಟ್ಟಿ, ಉದ್ಯಮಿ ಲೋಕೇಶ್ ಕೋಡಿಕೆರೆ, ಕೇಂದ್ರ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಜೆಸಿಂತಾ, ಸಂಸ್ಥೆಯ ರೀಜನಲ್ ಬಿಸಿನೆಸ್ ಮ್ಯಾನೇಜರ್ ರಘುರಾಮ ರಾವ್, ಏರಿಯಾ ಬಿಸಿನೆಸ್ ಮ್ಯಾನೇಜರ್ ಕೇಶವ, ಲೀಡ್ ಟ್ರೈನರ್ ಪ್ಯಾನ್ ಇಂಡಿಯಾ ಅರವಿಂದ್, ಸ್ಟೋರ್ ಮ್ಯಾನೇಜರ್ ಪ್ರಶಾಂತ್, ಪ್ರಥಮ ಗ್ರಾಹಕರಾದ ರಜತ ಮತ್ತು ರಂಜಿತಾ ಮೊದಲಾದವರಿದ್ದರು.
ಡಾ.ಜಾಸ್ಮಿನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
ಆದಿತ್ಯ ಬಿರ್ಲಾ ಗ್ರೂಪ್‌ನ ವಿಶ್ವಾಸಾರ್ಹ ಪರಂಪರೆಯನ್ನು ಆಧರಿಸಿರುವ ಇಂದ್ರಿಯಾ ಮಂಗಳೂರಿನ ಮಳಿಗೆಯಲ್ಲಿ ಕರಕುಶಲ ಆಭರಣ ಆಯ್ಕೆಗೆ ಅವಕಾಶವಿದೆ. ಸಂಸ್ಕೃತಿಯನ್ನು ಆಧುನಿಕ ಸೊಬಗಿನೊಂದಿಗೆ ಬೆಸೆಯಲಿದೆ. ಮಳಿಗೆಯಲ್ಲಿ ಗ್ರಾಹಕರು ಕ್ಯುರೇಟೆಡ್ ವಲಯಗಳನ್ನು ಕಾಣಬಹುದು. ಇದರಲ್ಲಿ ಮೀಸಲಾದ ಕಾರೀಗರಿ (ಕುಶಲಕರ್ಮಿಗಳ) ಸ್ಥಳ ಮತ್ತು 28,000 ಕ್ಕೂ ಹೆಚ್ಚು ವಿನ್ಯಾಸಗಳ ಪ್ರದರ್ಶನವಿದೆ. ನಗು ಮೊಗದ ಸೇವೆ ನೀಡಲು ಸದಾ ಬದ್ಧವಾಗಿದೆ.