ಪುತ್ತೂರು ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಮಾತನಾಡಿದರು. ಎನ್.ಸುಂದರ ರೈ ಸವಣೂರು, ಬಿ.ಮಹಾಬಲ ರೈ ಬೋಳಂತೂರು ಇತರರು ಇದ್ದರು. 
ದಕ್ಷಿಣ ಕನ್ನಡ

ಆದರ್ಶ ಸಹಕಾರ ಸಂಘಕ್ಕೆ ೨.೬೦ ಕೋಟಿ ರೂ. ಲಾಭ ADARSHA

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಮಾಹಿತಿ
  • ವಾರ್ಷಿಕ ಮಹಾಸಭೆ
ಪುತ್ತೂರು: ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ವರದಿ ವರ್ಷದಲ್ಲಿ ಒಟ್ಟು ೧೦೯೩.೮೩ ಕೋಟಿ ರೂ. ವ್ಯವಹಾರ ನಡೆಸಿ ೨.೬೦ ಕೋಟಿ ರೂ. ಲಾಭ ಗಳಿಸಿದೆ. ಸದಸ್ಯರಿಗೆ ಶೇ.೧೯ ಲಾಭಾಂಶ ನೀಡುತ್ತಿದ್ದು, ಮುಂದಿನ ೨-೩ ವರ್ಷಗಳಲ್ಲಿ ಸದಸ್ಯರಿಗೆ ಶೇ.೨೫ ಲಾಭಾಂಶ ನೀಡುವ ಮಟ್ಟಕ್ಕೆ ಸಂಘವನ್ನು ಬೆಳೆಸಬೇಕಾಗಿದೆ. ಸವಣೂರಿನಲ್ಲಿ ೬ ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು, ಸಂಘದ ರಜತ ಸಂಭ್ರಮದೊಂದಿಗೆ ಕಟ್ಟಡ ಉದ್ಘಾಟನೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದ ನಡೆಸಲು ಪ್ರಯತ್ನಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಹೇಳಿದರು.
ದರ್ಬೆಯ ಪ್ರಶಾಂತ್ ಮಹಲ್‌ನ ಸನ್ನಿಧಿ ಸಭಾಂಗಣದಲ್ಲಿ ಪುತ್ತೂರು ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘದ ಹೆಸರನ್ನು ಆದರ್ಶ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಎಂದು ಬದಲಾವಣೆ ಮಾಡಿಕೊಳ್ಳಲಾಗುತ್ತಿದ್ದು, ಸಂಘವು ನೇರವಾಗಿ ಸರ್ಕಾರದ ಅಽನಕ್ಕೆ ಬರಲಿದೆ. ಸಂಘವನ್ನು ಉಡುಪಿ, ಮಡಿಕೇರಿಗೆ ವಿಸ್ತರಿಸಲು ಅನುಮತಿ ಪಡೆಯಲಾಗಿದ್ದು, ಡಿಸೆಂಬರ್‌ನಲ್ಲಿ ಮಡಿಕೇರಿ ಶಾಖೆ ಪ್ರಾರಂಭಿಸುವ ಉದ್ದೇಶವಿದೆ. ಸದಸ್ಯರ ೫೦ ಲಕ್ಷ ರೂ. ಸಾಲದ ಮಿತಿಯನ್ನು ೧ ಕೋಟಿ ರೂ.ಗೆ ಹಾಗೂ ಚಿನ್ನಾಭರಣ ಸಾಲದ ಮಿತಿಯನ್ನು ೨೫ರಿಂದ ೫೦ ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದರು.
ವಿವಿಧ ಶಾಖೆಗಳಲ್ಲಿ ನಿವೃತ್ತರಾದ ಮನೋಜ್ ಕುಮಾರ್ ಹಾಗೂ ಸುರೇಖಾ ಬಿ. ಅವರನ್ನು ಗೌರವಿಸಲಾಯಿತು. ಉತ್ತಮ ಪ್ರದರ್ಶನ ತೋರಿದ ಶಾಖೆಗಳಿಗೆ ಬಹುಮಾನ ನೀಡಲಾಯಿತು.
ಸಂಘದ ಉಪಾಧ್ಯಕ್ಷ ಎನ್.ಸುಂದರ ರೈ ಸವಣೂರು, ನಿರ್ದೇಶಕರಾದ ಬಿ.ಮಹಾಬಲ ರೈ ಬೋಳಂತೂರು, ಜಯಪ್ರಕಾಶ್ ರೈ ಚೊಕ್ಕಾಡಿ, ಅಶ್ವಿನ್ ಎಲ್.ಶೆಟ್ಟಿ ಸವಣೂರು, ಎಸ್.ಎಂ.ಬಾಪು ಸಾಹೇಬ್, ಕೆ.ರವೀಂದ್ರನಾಥ ಶೆಟ್ಟಿ ಕೇನ್ಯ, ಎನ್.ರಾಮಯ್ಯ ರೈ ಕೆದಂಬಾಡಿ, ಚಿಕ್ಕಪ್ಪ ನಾಯ್ಕ್ ಅರಿಯಡ್ಕ, ಸೀತಾರಾಮ ಶೆಟ್ಟಿ ಬಿ.ಮಂಗಳೂರು, ವಿ.ವಿ.ನಾರಾಯಣ ಭಟ್ ನರಿಮೊಗರು, ಜೈರಾಜ್ ಭಂಡಾರಿ ಪುತ್ತೂರು, ಮಹಾದೇವ ಎಂ.ಮಂಗಳೂರು, ಪೂರ್ಣಿಮಾ ಎಸ್.ಆಳ್ವ, ಯಮುನಾ ಎಸ್.ರೈ ಗುತ್ತುಪಾಲ್, ರಶ್ಮಿ ಎಸ್.ರೈ ಉಪಸ್ಥಿತರಿದ್ದರು.
ಸಂಘದ ಮಹಾಪ್ರಬಂಧಕ ವಸಂತ್ ಜಾಲಾಡಿ ವರದಿ ಮಂಡಿಸಿದರು. ಎಜಿಎಂ ಸುನಾದ್ ರಾಜ್ ಶೆಟ್ಟಿ ಕಳೆದ ಮಹಾಸಭೆಯ ನಡಾವಳಿ ಹಾಗೂ ಪುತ್ತೂರು ಶಾಖಾ ಪ್ರಬಂಧಕ ಪವನ್ ತಿಳಿವಳಿಕೆ ಪತ್ರ ಮಂಡಿಸಿದರು. ಮಾರಾಟ ವಿಭಾಗದ ಅಽಕಾರಿ ಶ್ರೀಧರ ಪೂಜಾರಿ ವಂದಿಸಿದರು.