ಸಾಂದರ್ಭಿಕ ಚಿತ್ರ 
ದಕ್ಷಿಣ ಕನ್ನಡ

ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಪೋಕ್ಸೋ, ದೌರ್ಜನ್ಯ, ವೀಸಾ ವಂಚನೆ ಪ್ರಕರಣ

ಕಾಸರಗೋಡು: ಪೋಕ್ಸೋ, ದೌರ್ಜನ್ಯ, ವೀಸಾ ವಂಚನೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಬಳಿಕ ತಲೆಮರೆಸಿಕೊಂಡಿದ್ದ ಚೆರುವತ್ತೂರು ಕಾಡಾಂಗೋಡು ನಿವಾಸಿ ಮುತ್ತಲೀಬ್ ಸಿ.ಎಚ್.(46) ಎಂಬಾತನನ್ನು ಮೈಸೂರಿನ ಹುಣಸೂರಿನಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.

ಹೊಸದುರ್ಗ ಡಿವೈಎಸ್‌ಪಿ ನಿರ್ದೇಶನದಂತೆ ಎಸ್‌ಐ ಸೈಯದ್ದೀನ್ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿದೆ. ಆರೋಪಿಯಲ್ಲಿದ್ದ 26 ಮೊಬೈಲ್ ಸಿಮ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇರಳದ ವಿವಿಧ ಪೊಲೀಸ್ ಠಾಣೆಗಳಲ್ಲಿ 2019ರಿಂದ ಅತ್ಯಾಚಾರ, ಪೋಕ್ಸೋ, ವೀಸಾ ವಂಚನೆ, ಮಹಿಳಾ ದೌರ್ಜನ್ಯ, ಹಲ್ಲೆ, ವಂಚನೆ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ. ಈ ಪೈಕಿ ಹಲವು ಪ್ರಕರಣಗಳಲ್ಲಿ ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯಗಳು ಆತನನ್ನು ತಲೆಮರೆಸಿಕೊಂಡಿರುವ ಆರೋಪಿಯೆಂದು ಘೋಷಿಸಿವೆ.