ಕಾಸರಗೋಡು: ಕುಂಬಳೆ-ಸೀತಾಂಗೋಳಿ-ಪುತ್ತಿಗೆ ರಸ್ತೆಯ ಪುತ್ತಿಗೆ ಸೇತುವೆ ಸನಿಹ ತಿರುವಿನಲ್ಲಿ ಆಟೋರಿಕ್ಷಾ ಮತ್ತು ಖಾಸಗಿ ಬಸ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಆಟೋ ಪ್ರಯಾಣಿಕ ಪುತ್ತಿಗೆ ಸಮೀಪದ ಕಮ್ಮುಂತಿಲ ನಿವಾಸಿ ಮೆಹಮೂದ್(78)ಮೃತಪಟ್ಟಿದ್ದಾರೆ.
ನ.11ರಂದು ಬಸ್ ಮತ್ತು ಆಟೋ ಡಿಕ್ಕಿಯಾಗಿ ಮೆಹಮೂದ್ ಹಾಗೂ ಆಟೋ ಚಾಲಕ ಗಾಯಗೊಂಡಿದ್ದರು. ಗಂಭೀರ ಗಾಯಗೊಂಡಿದ್ದ ಮೆಹಮೂದ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ. ಆಟೋ ಚಾಲಕ ಕಾಸರಗೋಡಿನ ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದಾರೆ.
ಅಪಘಾತಕ್ಕೆ ಬಸ್ ಸಿಬ್ಬಂದಿ ನಿರ್ಲಕ್ಷ್ಯ ಕಾರಣವೆಂದು ದೂರಿ ನಾಗರಿಕರು ಬಸ್ ಸಂಚಾರಕ್ಕೆ ತಡೆಯೊಡ್ಡಿದ್ದರು. ಕುಂಬಳೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು. ನಂತರ ಬಸ್ ಮಾಲೀಕರು ಪುತ್ತಿಗೆ-ಸೀತಾಂಗೋಳಿ ಹಾದಿಯಾಗಿ ಬಸ್ ಸಂಚಾರ ಸ್ಥಗಿತಗೊಳಿಸುವ ಮೂಲಕ ಸಂತಾಪ ವ್ಯಕ್ತಪಡಿಸಿದರು.